ಮತದಾನ ಜಾಗೃತಿ ಬೈಕ್ ಜಾಥಾ
ಯಮಕನಮರಡಿ 12: ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣೆ ಅಧಿಕಾರಿ ಕರ್ನಾಟಕ ಜಿಲ್ಲಾ ಚುನಾವಣೆ ಅಧಿಕಾರಿ ಬೆಳಗಾವಿ ಹಾಗೂ ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ ತಾಲೂಕಾ ಆಡಳಿತ ಹಾಗೂ ತಾಲೂಕ ಪಂಚಾಯತಿ ಇವರ ಸಂಯುಕ್ತ ಆಶ್ರಯದಲ್ಲಿ ನನ್ನ ಮತ ನನ್ನ ಹಕ್ಕು ದಿ.12ರಂದು ಗ್ರಾಮದಲ್ಲಿ ಮತದಾನ ಜಾಗೃತಿ ಬೈಕ್ ಜಾಥಾ ಆಯೋಜಿಸಲಾಗಿತ್ತು. ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವನಿಂಗ್ ಡಂಗ ಶಾಂತಕುಮಾರ ಮಲಾಜಿ ಲೆಕ್ಕಪರಿಶೋಧಕ ರಾವಳ್ ಹಾಗೂ ಸಿಬ್ಬಂದಿವರ್ಗ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಿದರು.