ತಾಳಿಕೋಟಿ

ಲೈಫ್ ಕೇರ್ ಫೌಂಡೇಶನ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಲೈಫ್ ಕೇರ್ ಫೌಂಡೇಶನ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ


ತಾಳಿಕೋಟಿ: ಮನುಷ್ಯ ಆಧುನಿಕ ಯುಗದಲ್ಲಿ ದುಡ್ಡಿನಿಂದ ಎಲ್ಲ ವಸ್ತುಗಳನ್ನೂ ಉತ್ಪಾದಿಸಲು ಸಾಧ್ಯವಿದೆ. ಆದರೆ ಮನುಷ್ಯನಿಗೆ ಅತ್ಯಗತ್ಯವಾಗಿರುವ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ರಕ್ತವನ್ನು ಒಬ್ಬ ವ್ಯಕ್ತಿಯಿಂದಲೇ ಪಡೆಯಬೇಕು. ಈ ಕಾಲದಲ್ಲಿ ರೊಕ್ಕಾ ಕೊಟ್ಟವನ ಭಕ್ತಿಗಿಂತ ರಕ್ತಾ ಕೊಟ್ಟವನ ಭಕ್ತಿಯೇ ದೊಡ್ಡದು ಎಂದು ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗದೇವರು ಹೇಳಿದರು.

ರವಿವಾರ ಪಟ್ಟಣದ ಮಹಲಗಲ್ಲಿ ಶಾದಿಮಹಲ್ ಹಾಲ್ನಲ್ಲಿ ಲೈಫ್ಕೇರ ಫೌಂಡೇಶನ್ ತಾಳಿಕೋಟಿ ಹಾಗೂ ಶ್ರೀ ಸಿದ್ಧೇಶ್ವರ ರಕ್ತನಿಧಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಹನಿ ರಕ್ತ ಒಂದು ಜೀವನವನ್ನು ಉಳಿಸುತ್ತದೆ. ರಕ್ತವನ್ನು ರಸ್ತೆಯ ಮೇಲೆ ನೀಡದೆ ಇಂಥಹ ಶಿಬಿರಗಳಲ್ಲಿ ನೀಡಿದರೆ ಅದು ನೂರಾರು ಜೀವಿಗಳನ್ನು ರಕ್ಷಿಸುತ್ತದೆ ಎಂದರು.

ಸಾಹಿತಿ ಅಶೋಕ ಹಂಚಲಿ ಹಾಗೂ ಪತ್ರಕರ್ತ ಜಿ.ಟಿ. ಘೋರ್ಪಡೆ ಮಾತನಾಡಿ ಪವಿತ್ರ ಬಕ್ರೀದ್ ಹಾಗೂ ಖಾಸ್ಗತೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡ ಈ ಶಿಬಿರ ಒಂದು ಭಾವೈಕ್ಯತೆಯ ಶಿಬಿರವಾಗಿದೆ. ನಮ್ಮ ಯುವಕರು ಇಂಥಹ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ತಮ್ಮ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ಈ ಶಿಬಿರದಲ್ಲಿ ಸುಮಾರು 75 ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಈ ಸಮಯದಲ್ಲಿ ಧಾಮರ್ಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಹಾಫೀಜ್ ಹುಸೇನ ಪಠಾಣ, ಗಣ್ಯರಾದ ಎಚ್.ಎಸ್. ಪಾಟೀಲ, ಅಲ್ಲಾಭಕ್ಷ ನಮಾಜಕಟ್ಟಿ, ಪಿಎಸ್ಐ ಸಂಕನಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಗನಿಸಾಬ ಲಾಹೋರಿ, ಹಸನ್ಸಾಬ ಕೊರ್ಕ್ , ಡಾ.ಆರ್.ಎಂ. ಕೋಳ್ಯಾಳ, ಡಾ.ಎ.ಎ. ನಾಲಬಂದ, ಶಿಕ್ಷಕ ರೋಶನ್ ಡೋಣಿ, ಅಲ್ತಾಫ ನಗಾರ್ಚಿ, ಮೋದಿನ ನಗಾಚರ್ಿ, ಡಾ. ನಾಗೂರ, ಡಾ. ಸುಹೇಲ ಸಗರ, ಮುಸ್ಲೀಂ ಬ್ಯಾಂಕ್ ಸಹವ್ಯವಸ್ಥಾಪಕ, ಇಬ್ರಾಹೀಂ ಆರಬೋಳ, ಉಪಾಧ್ಯಕ್ಷ ಇಲಿಯಾಸ್ ನಮಾಜಕಟ್ಟಿ, ಕಾರ್ಯದರ್ಶಿ ಇಸ್ಮಾಯಿಲ್ ಡೋಣಿ, ಸದಸ್ಯರಾದ ಮೂಸಾ ಆರಬೋಳ, ಮುದಸ್ಸರ ಜಮಾದಾರ, ನೂರ ಬಿರಾದಾರ, ಆರೀಫ ಮುರಾಳ, ಶರೀಫ ಮುಲ್ಲಾ ವಿರೇಶ ಹೊಸಮನಿ, ಸಚೀನ ಹೊಳಿ ಇದ್ದರು 

ಸುದ್ದಿ ಓದಿ