ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ವಿವೇಕಾನಂದರ ಕೊಡುಗೆ ಅಪಾರ: ಅಧ್ಯಾಪಕ ರಾಜಶೇಖರ್
ಬಳ್ಳಾರಿ 13: ಸ್ವಾಮಿ ವಿವೇಕಾನಂದರು ವಿಶ್ವ ಕಂಡ ಶ್ರೇಷ್ಠ ಸಂತ ಹಾಗೂ ಭಾರತದ ಪರಂಪರೆ ಮತ್ತು ಇತಿಹಾಸವನ್ನು ವಿಶ್ಚಕ್ಕೆ ಉಣಬಡಿಸಿದ ಮಹಾನ್ ಚೇತನ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಬಹಳ ಅಪಾರವಾದದ್ದು, ಸದೃಢ ಮತ್ತು ಬಲಿಷ್ಟ ಭಾರತ ನಿರ್ಮಾಣಕ್ಕಾಗಿ ವಿವೇಕಾನಂದರು ಹಲವಾರು ರೀತಿಯಲ್ಲಿ ಯುವಕರಿಗೆ ಮಾರ್ಗದರ್ಶವನ್ನು ನೀಡಿದ್ದಾರೆ. ಭಾರತದ ಸನಾತನ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಭಾರತವನ್ನು ಮೇರು ಮಟ್ಟದಲ್ಲಿ ತೋರಿಸಿದ ಮಹಾನ್ ಸಂತರು ಎಂದು ಅಧ್ಯಾಪಕ ರಾಜಶೇಖರ್ರವರು ಮಾತನಾಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂತಿಯನ್ನು ಬಳ್ಳಾರಿ ವಿಭಾಗ ಕಾರ್ಯಾಲಯ ಮತ್ತು ನಗರದ ವಿವಿಧ ಕಾಲೇಜುಗಳಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಭಾಗ ಪ್ರಮುಖ ಡಾ. ದೊಡ್ಡಬಸವನಗೌಡ, ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಪರಿಷತ್ತಿನ ನಗರ ಸಂಘಟನಾ ಕಾರ್ಯದರ್ಶಿ ಕೌಶಿಕ್, ವಿಭಾಗ ಸಹಸಂಚಾಲಕರಾದ ಹರ್ಷನಾಯ್ಕ್, ತಾಲೂಕು ಸಂಚಾಲಕÀ ಸುರೇಶ್ ಬಡಿಗೇರ್, ನಗರ ಸಹಕಾರ್ಯದರ್ಶಿಯಾದ ವಿನೋದ್ ಕುಮಾರ್, ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಸೃಷ್ಠಿ, ಜಿಲ್ಲಾ ಸಂಚಾಲಕ ನವೀನ್ ಕುಮಾರ್, ನಗರ ಸಹಕಾರ್ಯದರ್ಶಿ ಹೇಮಾವತಿ, ಕಾರ್ಯಾಲಯ ಕಾರ್ಯದರ್ಶಿ ಮನೋಜ್ ಕುಮಾರ್, ಮತ್ತಿತರ ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.