ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭೇಟಿ ಕಾರ್ಯಕ್ರಮ
ತಾಳಿಕೋಟಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗಲ್ಸರ್್ ಇಸ್ಲಾಮಿಕ್ ಆರ್ಗನೈಜೇಶನ್ (ಉಔ) ನಗರ ಶಾಖೆಯ ವತಿಯಿಂದ ಪಟ್ಟಣದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಿರುವ ಮಹಿಳೆಯರನ್ನು ಭೇಟಿ ಮಾಡಿ ಹಣ್ಣು ಹಂಪಲಗಳ ಕಿಟ್ ಹಾಗೂ ಸಾಹಿತ್ಯಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಪಟ್ಟಣದಲ್ಲಿ ಕಳೆದ 15 ವರ್ಷಗಳಿಂದ ಧಾರ್ಮಿಕ ಜಾಗೃತಿ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಗಲ್ಸರ್್ ಇಸ್ಲಾಮಿಕ್ ಆರ್ಗನೈಜೇಶನ್ (ಉಔ) ನಗರ ಶಾಖೆಯು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಂಡಿತು. ಇದರ ಅಂಗವಾಗಿ ಪಟ್ಟಣದಲ್ಲಿ ಕಳೆದ 45 ವರ್ಷಗಳಿಂದ ವೈದ್ಯೆಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಖ್ಯಾತ ವೈದ್ಯೆ ಡಾ.ಸರೋಜಾ ಕಾಚರ್ಿ, ತನ್ನ 75ನೇ ಇಳಿ ವಯಸ್ಸಿನಲ್ಲೂ ತರಕಾರಿ ವ್ಯಾಪಾರವನ್ನು ಮಾಡಿ ಕುಟುಂಬದ ಸದಸ್ಯರನ್ನು ಸಲಹುತ್ತಿರುವ ವೃದ್ಧೆ ಅಂಬಮ್ಮ, ಸಮಾಜದ ಬಡ ಹೆಣ್ಣು ಮಕ್ಕಳನ್ನು ಸ್ವಾಲಂಬಿಯನ್ನಾಗಿ ಮಾಡಲು ಉಚಿತವಾಗಿ ಹೊಲಿಗೆಯ ತರಬೇತಿಯನ್ನು ನೀಡುತ್ತಿರುವ ತಸ್ಲೀಮಾ ಬಿದರಿ ಹಾಗೂ ವಿಪಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣದ ದಾಸೋಹ ನೀಡುತ್ತಿರುವ ಮಾದರಿ ವ್ಯವಸ್ಥಾಪಕಿ ಐರಿನ್ ಈ ಎಲ್ಲ ಸಾಧಕಿಯರನ್ನು ಭೇಟಿ ಮಾಡಿ ಅವರ ಈ ಸ್ಮರಣೀಯ ಸೇವೆಯನ್ನು ಶ್ಲಾಘಿಸಿ ಪ್ರೋತ್ಸಾಹಿಸುವದರೊಂದಿಗೆ ಹಣ್ಣು ಹಂಪಲುಗಳ ಕಿಟ್ ಹಾಗೂ ಆಧ್ಯಾತ್ಮಿಕ ಸಾಹಿತ್ಯಗಳನ್ನು ನೀಡಿ ಗೌರವಿಸಲಾಯಿತು.
ಈ ಸಮಯದಲ್ಲಿ ಜಿಐಓ ಸಲಹಾ ಸಮಿತಿ ಸದಸ್ಯೆ ಶ್ರೀಮತಿ ಜೂಫೀಷಾ ಖಾಜಿ, ಅಧ್ಯಕ್ಷೆ ಕುಮಾರಿ ಸಫುರಾ ನಮಾಜಕಟ್ಟಿ, ಸದಸ್ಯೆಯರಾದ ಫಜೀಯಾ ಸುಲ್ತಾನಾ ಮಕಾನದಾರ, ಅಜ್ಮತ್ಲಾಹೋರಿ, ಸಾದಿಯಾ ಸಮ್ರೀನ್, ಸಬೀಹಾ ಆರಬೋಳಿ, ಆಫ್ರೀನ್ ನಮಾಜಕಟ್ಟಿ, ಶಾಹೀನ ಕೊತರ್ಿ, ಅಲ್ಫಿಯಾ ತಬಸ್ಸುಮ್ ನಮಾಜಕಟ್ಟಿ, ಸುಮಯ್ಯಾ ಲಾಹೋರಿ, ಜಮಾಅತಿ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕಿ ಹಾಗೂ ಸ್ಥಾನೀಯ ಅಧ್ಯಕ್ಷರು ಇದ್ದರು