ಶಿಗ್ಗಾವ್

ವಿಶ್ವನಾಥ ರೆಡ್ಡಿ ಮುಖ್ಯಮಂತ್ರಿಗಳ ಪದಕಕ್ಕಾಗಿ ಆಯ್ಕೆ

ವಿಶ್ವನಾಥ ರೆಡ್ಡಿ ಮುಖ್ಯಮಂತ್ರಿಗಳ ಪದಕಕ್ಕಾಗಿ ಆಯ್ಕೆ

ಶಿಗ್ಗಾವಿ 26: ತಾಲೂಕಿನ ಗಂಗಿಬಾವಿಯ ಕೆಎಸ್‍ಆರ್‍ಪಿ 10ನೇ ಮೀಸಲು ಪಡೆಯ ಸಹಾಯಕ ಕಮಾಂಡೆಂಟ್ ವಿಶ್ವನಾಥ ರೆಡ್ಡಿ ಅವರಿಗೆ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಪದಕಕ್ಕಾಗಿ ಆಯ್ಕೆಯಾಗಿದ್ದಾರೆ.

ಗದಗ ಜಿಲ್ಲೆ ಮಾಗಡಿಯವರಾದ ವಿಶ್ವನಾಥ ರೆಡ್ಡಿ ಅವರು ಮಾಜಿ ಸೈನಿಕರಾಗಿದ್ದು, ಪೊಲೀಸ್ ಇಲಾಖೆ ಸೇರುವ ಮುನ್ನ 17 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.

ಸೈನ್ಯದಲ್ಲಿದ್ದಾಗ ಅಪರೇಷನ್ ವಿಜಯ (ಕಾರ್ಗಿಲ್), ಅಪರೇಷನ್ ಪರಾಕ್ರಮ, ಅಪರೇಷನ್ ರಕ್ಷಕದಂತಹ ಸೈನಿಕ ಕಾರ್ಯಾಚರಣೆ ಪಾಲ್ಗೊಂಡು 2008ರಲ್ಲಿ ಕೆಎಸ್‍ಆರ್‍ಪಿಗೆ ನೇರ ನೇಮಕಾತಿ ಹೊಂದಿದ್ದಾರೆ. ಬೆಂಗಳೂರ, ಮುನಿರಾಬಾದ್‍ನಲ್ಲಿ ಸೇವೆ ಸಲ್ಲಿಸಿರುವ ವಿಶ್ವನಾಥ ಅವರು ಕಳೆದ ಒಂದು ವರ್ಷಎರಡು ತಿಂಗಳಿಂದ ಶಿಗ್ಗಾವಿ ಗಂಗಿಬಾವಿಯ ಕೆಎಸ್‍ಆರ್‍ಪಿ 10ನೇ ಮೀಸಲು ಪಡೆಯ ಸಹಾಯಕ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುದ್ದಿ ಓದಿ