ಬಳ್ಳಾರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
ಬಳ್ಳಾರಿ 17: ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ತಹಸೀಲ್ದಾರ್ ರೆಹಮಾನ್ ಭಾಷಾ, ಸಮಾಜದ ಮುಖಂಡರಾದ ಕೆ.ತಿಪ್ಪೇಸ್ವಾಮಿ, ಚಂದ್ರಕಾಂತ ಸ. ಸೋನಾರ, ವಿ.ಬಿ.ಕೃಷ್ಣಾಚಾರಿ, ಎ.ಚಂದ್ರಶೇಖರ್ ಶ್ರೀಧರಗಡ್ಡೆ, ಶೈಲಾ ಆಚಾರ್ಯ, ಬಿ.ಚಂದ್ರಶೇಖರ್ ಆಚಾರ್ಯ ಕಪ್ಪಗಲ್ಲು ಹಾಗೂ ಇಲಾಖೆ ಸಿಬ್ಬಂದಿ ಮತ್ತು ಇತರರು ಇದ್ದರು.