ವಿಶ್ವಭಾರತಿ ವಿವಿ ಶತಮಾನೋತ್ಸವ: ನಾಳೆ ಮೋದಿ ಭಾಗಿ
ನವದೆಹಲಿ, ಡಿಸೆಂಬರ್ 23: ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದ ಗುರುವಾರ
ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ವಿಡಿಯೋ
ಕಾನ್ಫರೆನ್ಸ್ ಮೂಲಕ ಶತಮಾನೋತ್ಸವ ಸಮಾರಂಭ ಉದ್ದೇಶಿ ಮಾತನಾಡಲಿದ್ದಾರೆ. ಮೋದಿ ಅವರು ಈ ವಿ.ವಿಯ ಕುಲಾಧಿಪತಿಗಳೂ
ಸಹ ಆಗಿದ್ದಾರೆ.
ಪಶ್ಚಿಮ
ಬಂಗಾಳ ರಾಜ್ಯಪಾಲರು ಮತ್ತು ಕೇಂದ್ರ ಶಿಕ್ಷಣ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಳೆದ
1921 ರಲ್ಲಿ ಗುರು ರವೀಂದ್ರ ಟ್ಯಾಗೋರರು ಈ ವಿವಿ ಸ್ಥಾಪಿಸಿದ್ದರು. ವಿಶ್ವ ಭಾರತಿಯನ್ನು 1951 ರ
ಮೇ ತಿಂಗಳಲ್ಲಿ ಶಾಸನಬದ್ಧವಾಗಿ ಕೇಂದ್ರ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು
ಘೋಷಿಸಲಾಯಿತು.
ಆಧುನಿಕ
ವಿಶ್ವ ವಿದ್ಯಾಲಯಗಳಂತೆ ಕ್ರಮೇಣ ಬದಲಾದರೂ ಈ ವಿಶ್ವವಿದ್ಯಾಲಯ ಗುರುದೇವ ಟ್ಯಾಗೋರರ ಶಿಕ್ಷಣ ನೀತಿಯನ್ನು
ಅನುಸರಿಸುತ್ತಿರುವುದು ವಿಶೇಷವಾಗಿದೆ.