ವೀರೇಶ್ವರ ನಾಯ್ಕಗೆ ಪಿಹೆಚ್ಡಿ ಪದವಿ
ಹಗರಿಬೊಮ್ಮನಹಳ್ಳಿ.26: ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ವೀರೇಶ್ವರ ನಾಯ್ಕ. ಜಿ ಇವರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಇಂಗ್ಲೀಷ್ ವಿಭಾಗದ ಡಾ.ಮುಕುಂದ ಲಮಾಣಿ ಇವರ ಮಾರ್ಗದರ್ಶನದಲ್ಲಿ “ಮಿಥ್ ಆ್ಯಂಡ್ ಫ್ಲೊಕ್ಲೊರ್ ಇನ್ ದಿ ಪ್ಲೇಸ್ ಆಫ್ ವೋಲೆ ಸೊಯಿಂಕಾ ಆ್ಯಂಡ್ ಗೀರೀಶ ಕಾರ್ನಾಡ್: ಎ ಕಂಪ್ಯಾರೇಟಿವ್ ಸ್ಟಡಿ” ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಹೆಚ್.ಡಿ(ಡಾಕ್ಟರೇಟ್) ಪದವಿಯನ್ನು ಪಡೆದಿದ್ದಾರೆ. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.