ವಿನಾಯಕ ಶೇಟ್ ದಂಪತಿಗೆ ಪುಣೆಯಲ್ಲಿ ಸನ್ಮಾನ
ಲೋಕದರ್ಶನ ವರದಿ
ಮುಂಡಗೋಡ:ರಂಗಭೂಮಿ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಪಟ್ಟಣದ ಕರಗಿನಕೊಪ್ಪದ ವಿನಾಯಕ ಶೇಟ್ ದಂಪತಿಗೆ ಮಹಾರಾಷ್ಟ್ರದ ಪುಣೆಯ ಆಧಾರ ಸೋಶಿಯಲ್ ಫೌಂಡೇಶನ್ ವತಿಯಿಂದ ಇತ್ತೀಚೆಗೆ 2023ರ ಇಂಟರ್ನ್ಯಾಷನಲ್ ಫೆನಿಕ್ಸ್ ಗ್ಲೋಬಲ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಕಳೆದ 20ವರ್ಷಗಳಿಂದ ಇವರು ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಾ ಹಲವಾರು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ನಟರಾಗಿ, ನಿರ್ದೇಶಕರಾಗಿ, ರಚನೆಕಾರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸುಮಾರು 300ಕ್ಕಿಂತ ಅಧಿಕ ನಾಟಕಗಳ ಪ್ರದರ್ಶನ ನೀಡಿ, 30ನಾಟಕಗಳಿಗೆ ನಿರ್ದೇಶಕರಾಗಿ, 5-6 ನಾಟಕಗಳನ್ನು ಬರೆದು, ರೈತಜಾತಿ ಎಂಬ ನಾಟಕವನ್ನು ಪುಸ್ತಕ ರೂಪಕ್ಕೆ ತಂದಿದ್ದಾರೆ. ಮಳಗಿ ಜಾತ್ರೆ ಮಂಜುಗುಣಿ, ಜಾತ್ರೆ ಬಂಕಸಾಣಾ ಜಾತ್ರೆ ಮೊದಲಾದ ಕಡೆ ನಾಟಕದ ಕಂಪನಿಗಳನ್ನು ಹುಟ್ಟು ಹಾಕಿ ನಾಟಕ ಪ್ರದರ್ಶನವನ್ನು ಮಾಡಿಸಿದ್ದಾರೆ. ಖ್ಯಾತ ಕಿರುತೆರೆಯ ಪೋಷಕ ಕಲಾವಿದ ನಿರ್ನಳ್ಳಿ ರಾಮಕೃಷ್ಣ ಭಟ್, ಹಾಸ್ಯ ಕಲಾವಿದರಾದ ಎಸ್.ಎಸ್.ಬಿರಾದಾರ, ಬ್ಯಾಂಕ್ ಜನಾರ್ಧನ್, ಖ್ಯಾತ ರಂಗಭೂಮಿ ಕಲಾವಿದೆ ಹ್ಯಾಲನ್ ಮೈಸೂರು ಹೀಗೆ ಹಲವಾರು ನಟ-ನಟಿಯರ ಜೊತೆ ರಂಗ ಅಭಿನಯ ಮಾಡಿದ ಕೀತರ್ಿ ಇವರಿಗೆ ಸಲ್ಲುತ್ತದೆ.
ಮಹಾರಾಷ್ಟ್ರ ಗಲ್ಸರ್್ ಯೂನಿಟ್ ಮುಂಬೈನ ಎನ್ಸಿಸಿ ಗ್ರೇಡ್ ಒನ್ ಆಫೀಸರ್ ಮೇಜರ್ ಮಾಲಿನಿ ಶರ್ಮಾ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ವಾಲ್ಮೀಕಿ ವಾಘೇ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶ ಡಾ.ರವೀಂದ್ರ ಕುಲಕರ್ಣಿ, ಡಾ.ಶಂಕರ ಮಾಹಿ, ಡಾ.ಎನ್.ಎ.ಸನದಿ, ಡಾ.ಉಮೇಶ ವಾಗೋಡೆ, ರಾಕೇಶ ಹೊಡೆನ್ ಓಲೇಕರ, ಡಾ. ದಿಲೀಪ್ ನೆವಸೆ, ದಾದಾಸಾಹೇಬ್ ಪಾಟೀಲ, ಡಾ.ಗ್ಲೋರಿ ಆರೇಕೀಯನ್ ಹಾಗೂ ಸಂಸ್ಥಾಪಕ ಅಧ್ಯಕ್ಷ ವಿಕ್ರಂ ವಸಂತ ಸಿಂಗಾಡಿ ಉಪಸ್ಥಿತರಿದ್ದರು.