ಸೌಂದತ್ತಿ

ವಿಘ್ನ ನಿವಾರಕನ ಬರಮಾಡಿಕೊಂಡ ಗ್ರಾಮಸ್ಥರು

ವಿಘ್ನ ನಿವಾರಕನ ಬರಮಾಡಿಕೊಂಡ ಗ್ರಾಮಸ್ಥರು

ಉಗರಗೋಳ, 08 : ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ಶನಿವಾರ ವಿಘ್ನ ನಿವಾರಕನನ್ನು ಗ್ರಾಮಸ್ಥರು ಸಡಗರದಿಂದ ಬರಮಾಡಿಕೊಂಡರು. 

ಬೆಳಿಗ್ಗೆಯಿಂದಲೇ ಗಣಪನ ಮೂರ್ತಿಗಳನ್ನು ತಂದು, ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದರು. ಸಕಲ ಜೀವರಾಶಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು. 

ಇಲ್ಲಿನ ಪೇಟೆ ಓಣಿ, ಗ್ರಾಮ ಪಂಚಾಯಿತಿ ಸಭಾಂಗಣ, ಬಸ್ ನಿಲ್ದಾಣ, ಬಸವೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನ, ಗುರು ಶಿವಪ್ಪಯ್ಯ ಶಿವಯೋಗಿಗಳ ಮಠ  ಮತ್ತಿತರ ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಯಿತು. ಕರಡಿ ಮಜಲು, ಬಜನೆ, ಜಾನಪದ ಕಲಾವಿದರ ನೃತ್ಯ, ಜಾಂಝ್‌ಪಥಕ್, ಡೋಲ್ ತಾಶಾ ಮೆರವಣಿಗೆಗೆ ಕಳೆ ತಂದುಕೊಟ್ಟವು. 

ಯಲ್ಲಮ್ಮನಗುಡ್ಡದಲ್ಲೂ ಪ್ರತಿಷ್ಠಾಪನೆ: ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ವ್ಯಾಪಾರಸ್ಥರು, ಸ್ಥಳೀಯರು ಸೇರಿಕೊಂಡು ಸಾರ್ವಜನಿಕ ಗಣಪನ ಮೂರ್ತಿ ಪ್ರತಿಷ್ಠಾಪಿಸಿದರು. ಗಣೇಶೋತ್ಸವ ಪ್ರಯುಕ್ತ ಯಲ್ಲಮ್ಮ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿದವು. 


ಸುದ್ದಿ ಓದಿ