ಮುಂದಗೋಡ

ಗೇಟ್ಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರ ಒತ್ತಾಯ

ಗೇಟ್ಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರ ಒತ್ತಾಯ

ಲೋಕದರ್ಶನ ವರದಿ

ಮುಂಡಗೋಡ ೧೬: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಅರಶಿಣಗೇರಿ ಗ್ರಾಮದಲ್ಲಿರುವ ದೊಡ್ಡ ಕೆರೆಯ ಎರಡು ಕಾಲುವೆ ಹಾಗೂ ಗೇಟ್ಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರು ಶನಿವಾರ ಒತ್ತಾಯಿಸಿದರು.   

ಅರಶಿಣಗೇರಿ ಗ್ರಾಮದಲ್ಲಿ ತಹಶೀಲ್ದಾರ ಶಂಕರ ಗೌಡಿ ಅವರ ನೇತೃತ್ವದಲ್ಲಿ ಜರುಗಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಚಿಕ್ಕ ನೀರಾವರಿ ಇಲಾಖೆಗೆ ನಿರ್ವಹಿಸುತ್ತಿರುವ ಕೆರೆಯ ಬಗ್ಗೆ ಆರೋಪಿಸಿದರು. ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯಿಂದ ಅಪಾರ ಪ್ರಮಾಣದಲ್ಲಿ ಜಮೀನುಗಳಿಗೆ ನೀರು ಹಾಯುತ್ತದೆ. ಆದರೆ ಕೆರೆಯ ಎರಡು ಕಡೆಗಳಲ್ಲಿರುವ ಕಾಲುವೆಗಳು ಸಮರ್ಪಕವಾಗಿಲ್ಲ. ಗೇಟ್ಗಳು, ಸಿಡಿಗಳು ಹಾಳಾಗಿದ್ದು ಅವುಗಳನ್ನು ದುರಸ್ತಿ ಪಡಿಸುವಂತೆ ಹಲವಾರು ಬಾರಿ ಚಿಕ್ಕ ನೀರಾವರಿ ಇಲಾಖೆಯವರಿಗೆ ತಿಳಿಸಿದರು ಸಹ ಪ್ರಯೋಜನವಾಗಲಿಲ್ಲ. ಇದರಿಂದ ಜಲಾಶಯದ ಕೆಳಭಾಗದಲ್ಲಿನ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಹಶೀಲ್ದಾರರಿಗೆ ದೂರಿದರು. ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚಚರ್ಿಸಿದ ತಹಶೀಲ್ದಾರರು ಸದ್ಯದಲ್ಲಿ  ಕಾಲುವೆ, ಗೇಟ್ ಹಾಗೂ ಸಿಡಿಗಳನ್ನು ದುರಸ್ತಿಪಡಿಸಿ ರೈತರಿಗೆ ಯಾವುದೆ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. 

ಶಾಲಾ ಕಟ್ಟಡ, ಸಮುದಾಯ ಭವನ, ಸ್ಮಶಾನ ಭೂಮಿ ಅವಶ್ಯಕತೆ, ವಸತಿ ಯೋಜನೆಯ ಮನೆಗಳ ಮಂಜೂರು, ಜಮೀನುಸರ್ವೇ  ಜಮಿನುಗಳಿಗೆ ಹೋಗುವ ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಭೆಯಲ್ಲಿ ಗ್ರಾಮ ಪಂಚಾಯತ ಹಾಗೂ ತಾಲೂಕು ಪಂಚಾಯತಗೆ ಸಂಬಂಧಿಸಿದ 57 ಅರ್ಜಿ ಗಳನ್ನು ಸಲ್ಲಿಸಿದರು. 5 ಅಜರ್ಿಗಳಿಗೆ ಸ್ಥಳದಲ್ಲಿಯೆ ಪರಿಹಾರ ನೀಡಲಾಯಿತು. ಸಂಬಂಧಿಸಿದ ಇಲಾಖೆಗಳಿಗೆ ಕೆಲವು ಅರ್ಜಿ ಗಳನ್ನು ರವಾನಿಸಲಾಯಿತು. 

ಕಂದಾಯ ಇಲಾಖೆ 19 ಅರ್ಜಿ ಯಲ್ಲಿ 5 ಅರ್ಜಿ ಗಳು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು, ತಾಲೂಕು ಪಂಚಾಯಿತಿ 17, ಸಮಾಜ ಕಲ್ಯಾಣ ಇಲಾಖೆ 5, ಭೂಮಾಪನ ಇಲಾಖೆ 6, ಕೃಷಿ ಇಲಾಖೆ 1, ಕೆಎಸ್ಆರ್ಟಿಸಿ ಯಲ್ಲಾಪುರ 2, ಹೆಸ್ಕಾಂ 1, ಆರೋಗ್ಯ ಇಲಾಖೆ 2, ಚಿಕ್ಕ ನೀರಾವರಿ ಇಲಾಖೆ 2 ಮತ್ತು ಕಾರ್ಮಿಕ  ಇಲಾಖೆ 2 ಸೇರಿ ಒಟ್ಟು  57 ಅರ್ಜಿ ಗಳು ಸ್ವೀಕೃತಿಯಾದವು. 

ತಾ.ಪಂ.ಇಒ ಪ್ರವೀಣ ಕಟ್ಟಿ, ಗ್ರಾ.ಪಂ.ಅಧ್ಯಕ್ಷ ಸಂತೋಷ ಸಣ್ಣಮನಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ  ಅಣ್ಣಪ್ಪ ನಾಯ್ಕ ಹಾಗೂ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ