ಜಮಖಂಡಿ

ಗ್ರಾಪಂ ಸದಸ್ಯರ ಗೌರವಧನ ಹೆಚ್ಚಿಸಲು ವಿಧಾನ ಪರಿಷತ್ ಸದಸ್ಯ ಶ್ರಮ ಬಹಳಷ್ಟಿದೆ: ಕಣಬೂರ

ಗ್ರಾಪಂ ಸದಸ್ಯರ ಗೌರವಧನ ಹೆಚ್ಚಿಸಲು ವಿಧಾನ ಪರಿಷತ್ ಸದಸ್ಯ ಶ್ರಮ ಬಹಳಷ್ಟಿದೆ: ಕಣಬೂರ

ಲೋಕದರ್ಶನ ವರದಿ,

ಜಮಖಂಡಿ20: ಗ್ರಾಮ ಪಂಚಾಯತ ಚುನಾಯಿತ ಜನಪ್ರತಿನಿಧಿಗಳ ಎರಡುಪಟ್ಟು ಗೌರವಧನ ಹೆಚ್ಚಿಸಲು ವಿಧಾನ ಪರಿಷತ್ ಸದಸ್ಯ, ಕೆ.ಪಿ.ಸಿ.ಸಿ. ಕಾಯರ್ಾಧ್ಯಕ್ಷ ಸಲೀಂ ಅಹ್ಮದ ಅವರ ಶ್ರಮ ಬಹಳಷ್ಟಿದೆ ಎಂದು ಕೆ.ಪಿ.ಸಿ.ಸಿ. ಕಾನೂನು, ಮಾನವಹಕ್ಕು ಮತ್ತು ಮಾಹಿತಿ ವಿಭಾಗದ ರಾಜ್ಯ ಸಂಘಟನಾ ಕಾರ್ಯದಶರ್ಿ, ನ್ಯಾಯವಾದಿ ಎಸ್.ಎಸ್. ಕಣಬೂರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.65 ರಷ್ಟು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ಸ್ಥಳೀಯ ಮಟ್ಟದಲ್ಲಿ ಸರಕಾರ ನೀಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ 1993ರಲ್ಲಿ ಪಂಚಾಯತ ರಾಜ್ ವ್ಯವಸ್ಥೆ ಜಾರಿಗೆ ತಂದಿದ್ದು, ಕನರ್ಾಟಕ ರಾಜ್ಯದಲ್ಲಿ ಸುಮಾರು 5,628 ಗ್ರಾಮ ಪಂಚಾಯತಗಳಿದ್ದು, 39,318 ಮಹಿಳಾ ಹಾಗೂ 52,084 ಪುರುಷ ಪ್ರತಿನಿಧಿಗಳು ಸೇರಿದಂತೆ ಅಂದಾಜು 91,402 ಗ್ರಾಮ ಪಂಚಾಯತ ಸದಸ್ಯರುಗಳಿಗೆ ಗೌರವಧನ ಲಭ್ಯವಾಗಲಿದೆ ಎಂದರು.

ಕಳೆದ ಬಾರಿ ವಿಧಾನ ಪರಿಷತ್ ಅಧಿವೇಶನದಲ್ಲಿ ಕೇರಳ ರಾಜ್ಯದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಗ್ರಾ.ಪಂ.  ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ಗೌರವಧನ ಮತ್ತು ವಿವಿಧ ಸೌಲಭ್ಯಗಳನ್ನು ಹೆಚ್ಚಿಸುವಂತೆ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಸರಕಾರದ ಮೇಲೆ ಒತ್ತಡ ಹೇರಿದ್ದರು. ರಾಜ್ಯ ಸರಕಾರ ಡಿಸೆಂಬರ್ 18 ರಂದು ಗ್ರಾಮ ಪಂಚಾಯತ ಅಧ್ಯಕ್ಷರಿಗೆ 6 ಸಾವಿರ, ಉಪಾಧ್ಯಕ್ಷರಿಗೆ 4 ಸಾವಿರ ಮತ್ತು ಸದಸ್ಯರಿಗೆ 2 ಸಾವಿರ ಮಾಸಿಕ ಗೌರವ ಧನ ಹೆಚ್ಚು ಮಾಡುವ ಮೂಲಕ ಎರಡುಪಟ್ಟು ಗೌರವಧನ ಲಭ್ಯವಾಗಲಿದೆ ಎಂದರು.

ಸರಕಾರ ಗೌರವಧನ ಹೆಚ್ಚಿಸಲು ವಿಧಾನ ಪರಿಷತ್ತಿನ ಸದಸ್ಯ ಸಲೀಂ ಅಹ್ಮದ ಎಲ್ಲ ಚುನಾಯಿತ ವಿಧಾನ ಪರಿಷತ್ ಸದಸ್ಯರಿಗೆ ರಾಜ್ಯ ಗ್ರಾಮ ಪಂಚಾಯತ ಸದಸ್ಯರುಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಡೆದಿರುವ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಇನ್ನೂ ಹೆಚ್ಚಿನ ಗೌರವಧನ ಹೆಚ್ಚಿಸಬೇಕೆಂದು ನಮ್ಮ ಭಾಗದ ಗ್ರಾಂ ಪಂ. ಸದಸ್ಯರುನ್ನೊಳಗೊಂಡ ನಿಯೋಗದೊಂದಿಗೆ ತೆರಲಿ ಮನವಿ ಸಲ್ಲಿಸಲಾಗುವದು ಎಂದರು.

ಪೋಟೋ : ಕೆ.ಪಿ.ಸಿ.ಸಿ. ಕಾನೂನು, ಮಾನವಹಕ್ಕು ಮತ್ತು ಮಾಹಿತಿ ವಿಭಾಗದ ರಾಜ್ಯ ಸಂಘಟನಾ ಕಾರ್ಯದಶರ್ಿ, ನ್ಯಾಯವಾದಿ ಎಸ್.ಎಸ್. ಕಣಬೂರ 

ಸುದ್ದಿ ಓದಿ