ಕಾಯಿಪಲ್ಲೆ ಸೋಸುವ ದಿನ ಖರೀದಿ ಜೋರು
Vijaypur-Indi news
ಇಂಡಿ 29: ಎಳ್ಳಾಮಾಸಿ ಉತ್ತರ ಕರ್ನಾಟದ ರೈತರ ಬಹು ದೊಡ್ಡ ಹಬ್ಬ ಹಾಗೂ ಇದರ ಹಿಂದಿನ ದಿನ ಅಂದರೆ ಇಂದು ಕಾಯಿ ಪಲ್ಲೆ ಖರೀದಿಸುವದು ಹಾಗೂ ಬಿಡಿಸುವದು ಅಥವಾ ಕಾಯಿಪಲ್ಲೆ ಸೋಸುವದೇ ಎಂದೇ ಕರೆಯುವದು ಒಂದು ದೊಡ್ಡ ಸಂಭ್ರ್ರಮ.
ಮಾಘ ಮಾಸದಲಿ ಹೇರಳವಾಗಿ ಸಿಗುವ ಕಾಯಿಪಲ್ಲೆ ಮಿರಿ ಮಿರಿ ಮಿಂಚುವ ಮೆಂತೆ , ಪುಂಡಿ ಪಲ್ಲೆ ,ಅಚ್ಚ ಹಸಿರಿನಂತೆ ಕಾಣುವ ಪಾಲಕ, ಸಬ್ಬಸಗಿ, ಉಳ್ಳಾಗಡ್ಡಿ , ತಪ್ಪಲ, ಗಜ್ಜರಿ, ಎಳೆ ಮೆಣಸುನಕಾಯಿ, ಎಣ್ಗಾಯಿಗೆ ಸಣ್ಣ ಬದನೆಕಾಯಿ ಕಾಯಿ ಆರಿಸುವದು ಹಸಿ ಖಾರಕ್ಕೆ ಬಲಿತ ಮೆಣಸಿನಕಾಯಿ ಬೇರೆ ಮಾಡುವದು, ಎಣ್ಣಿಯೊಳಗ ಉಪ್ಪ ಹಚ್ಚಿ ಹುರಿಯಕಂತ ಎಳಿ ಮೆಣಸಿನಕಾಯಿ ಬ್ಯಾರೆ ಮಾಡುವದು, ಎಳಿ ಹುಣಸೆಕಾಯಿ ಬಿಡಿಸಿ ಇಡುವದು ಕಾಳುಗಳನ್ನು ನೆನಸಿಡೊದು ಇದಕ್ಕೆಲ್ಲ ಹಬ್ಬದ ದಿನ ಸಮಯವಿರದಿರುವುದರಿಂದ ಹಿಂದಿನ ದಿನವೇ ಎಲ್ಲ ತಯಾರಿ ಮಾಡುವರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 