ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ: ಸಂಭ್ರಮಾಚರಣೆ
ಹಗರಿಬೊಮನಹಳ್ಳಿ 09: ವಿಜಯನಗರ ಜಿಲ್ಲೆ ಘೋಷಣೆ ಹಿನ್ನೆಲೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರು ಸಂಭ್ರಮಾಚರಿಸಿದರು.ಪಶ್ಚಿಮ ತಾಲೂಕುಗಳು ಸೇರಿದಂತೆ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿರುವುದು ಈ ಭಾಗದ ರೈತರು, ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳಿಗೆ ಅನುಕೂಲವಾಹುತ್ತದೆ, ಈ ಮೊದಲು ಬಳ್ಳಾರಿ ದೂರವಾಗುತ್ತಿತ್ತು. ಸರ್ಕಾರ ಬಳ್ಳಾರಿಗೆ ಐದು ತಾಲೂಕು ವಿಜಯನಗರ ಜಿಲ್ಲೆಗೆ 6 ತಾಲೂಕು ಸೇರಿಸಿ ವಿಭಜಿಸಿ ಭಜನೆ ಮಾಡಿರುವುದು ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಹಗರಿಬೊಮ್ಮನಹಳ್ಳಿ ಶೈಕ್ಷಣಿಕ ಜಿಲ್ಲೆಯಾಗಿ ಘೋಷಣೆ ಯಾಗಬೇಕು ಎಂದು ಅಕ್ಕಿ ತೊಟೇಶ್ ಆಗ್ರಹಿಸಿದರು..
ಈ ಸಂದರ್ಭದಲ್ಲಿ ಪತ್ರೇಶ್ ಹಿರೇಮಠ್, ರಕ್ಷಣಾ ವೇದಿಕೆಯ ಎನ್ಎಂ ಗೌಸ್, ಹೆಗ್ಡಾಳ್ ರಾಮಣ್ಣ,, ಕೊಟ್ರೇಶ್ ಶೆಟ್ಟರ್, ಸತ್ಯನಾರಾಯಣ ವಕೀಲರು, ಮಂಜುನಾಥ್, ಕೊಟ್ರೇಶ್, ಸಂತೋಷ್, ಬದಾಮಿ ನಟರಾಜ್, ಸಂತೋಷ್ ಪೂಜಾರ್ ಇತರರು ಇದ್ದರು.