ಬಳ್ಳಾರಿ

ವಿಜಯದಶಮಿ: ಶ್ರೀರಾಮಾಲಾದೇವಿ ಉತ್ಸವಮೂರ್ತಿ ಮೆರವಣಿಗೆ

ವಿಜಯದಶಮಿ: ಶ್ರೀರಾಮಾಲಾದೇವಿ ಉತ್ಸವಮೂರ್ತಿ ಮೆರವಣಿಗೆ

ಲೋಕದರ್ಶನ ವರದಿ 

ಬಳ್ಳಾರಿ 16:  ಸ್ಥಳೀಯ ಬಂಡಿಹಟ್ಟಿಯಲ್ಲಿ ವಿಜಯದಶಮಿ ಪ್ರಯುಕ್ತ ಗ್ರಾಮದೇವತೆ ಶ್ರೀರಾಮಾಲಾದೇವಿ ಉತ್ಸವಮೂರ್ತಿ ಮೆರವಣಿಗೆ ಮತ್ತು ಬನ್ನಿಮುಡಿಯುವ ಆಚರಣೆ ಕಾರ್ಯಕ್ರಮ ಶುಕ್ರವಾರದಂದು ಸಂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ದೇವಿಗೆ ಗ್ರಾಮಸ್ಥರು ವಿವಿಧ ಬಗೆಯಿಂದ ಪೂಜಿಸಿದರು. ನಂತರ ನಡೆದ ಉತ್ಸವ ಮೂರ್ತಿಯ ಮೆರವಣಿಗೆಯು ಡೊಳ್ಳು, ಭಜನೆ, ಕೋಲಾಟ ಮುಂತಾದ ವಾದ್ಯಮೇಳಗಳೊಂದಿಗೆ ಸಾಗಿತು.  

ಮೆರವಣಿಗೆಯು ಬಂಡಿಹಟ್ಟಿ ಮುಖ್ಯ ರಸ್ತೆ, ವಡ್ಡರ ಕೇರಿ, ಈಡಿಗರ ಕೇರಿಯ ಮೂಲಕ ಹಾದು ಬನ್ನಿಮಹಾಂಕಾಳಮ್ಮ ದೇವಿ ಶಮೀವೃಕ್ಷ ಕಟ್ಟೆಗೆ ತಲುಪಿತು. ಈ ಸಂದರ್ಭದಲ್ಲಿ ಉತ್ಸವ ಮೂರ್ತಿಯನ್ನು ಪೂಜಿಸಿ ಬನ್ನಿಮುಡಿಯುವ ಕಾರ್ಯಕ್ರಮ ನಡೆಯಿತು. ಭಕ್ತರು ಮಂಗಳಾರುತಿ ಪದ ಹಾಡಿದರು. ಇದೇ ವೇಳೆ ನೆರೆದಿದ್ದ ಮಹಿಳೆಯರು ವಿವಿಧ ಬಗೆಯ ಜನಪದ ಆಟದಲ್ಲಿ ತೊಡಗಿದ್ದರು. ನಂತರ ಉತ್ಸವ ಮೂರ್ತಿಯ ಮೆರವಣಿಗೆಯು ದೇವಸ್ಥಾನಕ್ಕೆ ತೆರಳಿತು.  

ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮಿತಿಯ ಗುಲ್ದಡ್ಡಿ ದೊಡ್ಡ ಈರ​‍್ಪ, ಪೊಲೀಸ್ ಪಾಂಡುರಂಗ, ಎನ್‌.ಕೆ.ಎಚ್‌.ಬಸವರಾಜ, ಕೆ.ಶಿವಶರಣ, ಗೋಡ್ಲಪ್ಪ, ಕೆ.ಟಿ.ಹನುಮಂತಪ್ಪ, ಮಾಜಿ ಕಾರ​‍್ೋರೇಟರ್ ನಾಗರಾಜ್, ಕಟ್ಲೇರ್ ಹೊನ್ನೂರ್‌ಸ್ವಾಮಿ, ಕೇಮಣ್ಣ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ