ವಿದ್ಯೆಯಿಂದ ಜ್ಞಾನದ ವಿಕಾಸ ಸಾಧ್ಯ
ವಿದ್ಯೆಯಿಂದ ಜ್ಞಾನದ ವಿಕಾಸ ಸಾಧ್ಯ
ಲೋಕದರ್ಶನ ವರದಿ
ಹೂವಿನ ಹಡಗಲಿ:ಸೆ.12- ವಿದ್ಯೆಯಿಂದ ಜ್ಞಾನದ ವಿಕಾಸ ಸಾಧ್ಯ ಎಂದು ವಿಜ್ಞಾನ ಶಿಕ್ಷಕಿ ಗೀತಾ ಪಿ ಎಂ ಹೇಳಿದರು.ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶನಿವಾರ ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.ವಿದ್ಯೆ ಕದಿಯಲಾರದ ಸಂಪತ್ತು. ಹೆಚ್ಚು ಓದಿದರೆ ಯಶಸ್ಸು ಗಳಿಸಲು ಸಾದ್ಯ ಎಂದರು.ಶಿಕ್ಷಕಿ ವೈ ಜಯಮ್ಮ ಮಾತನಾಡಿ ಮಹಾನ್ ಸಾಧಕರ ಕಿರು ಹೊತ್ತಿಗೆಯನ್ನು ಬಹುಮಾನವಾಗಿ ನೀಡಿದ್ದಾರೆ.ಅವರ ವಿಚಾರ ನಡೆ ನುಡಿ ಅರಿತು ಉತ್ತಮ ನಾಗರೀಕರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ಸುರೇಶ ಅಂಗಡಿ ಮಾತನಾಡಿ ಈಗಿನ ಕಾಲದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ತುಂಬಾ ಕಷ್ಟ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕು ಎಂದರು.ಘಟಕವಾರು ಕಿರು ಪರೀಕ್ಷೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಪುಸ್ತಕ ಲೇಖನಿ ನೀಡಲಾಯಿತು.ಶಾಲಾ ಶಿಕ್ಷಕರಾದ ಬಸಪ್ಪ ಕೆ ಪ್ರತಿಮಾ ಎನ್ ಆನಂದ್ ಜಿ ರೇಖಾ ಎಸ್ ಇದ್ದರು.