ಹೂವಿನ ಹಡಗಲಿ

ಗಾಂಧೀಜಿ ನಾನಾ ಭಾವಚಿತ್ರ ಬಿಡಿಸುವ ಸ್ಪರ್ಧೆ

ಗಾಂಧೀಜಿ ನಾನಾ ಭಾವಚಿತ್ರ ಬಿಡಿಸುವ ಸ್ಪರ್ಧೆ


ಹೂವಿನಹಡಗಲಿ, ಅ.01: ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಇಲ್ಲಿನ ಜಿಬಿಆರ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ‘ಗಾಂಧೀಜಿ ನಾನಾ ಭಾವಚಿತ್ರ ಬಿಡಿಸುವ ಮೂಲಕ ವ್ಯಕ್ತಿತ್ವ ಚಿತ್ರಣ’ ಕಾರ್ಯಕ್ರಮ ನಡೆಯಿತು.  

ಎನ್‌ಎಸ್‌ಎಸ್, ಗಾಂಧಿ ಅಧ್ಯಯನ ಕೇಂದ್ರ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಅಜೀಂ ಪ್ರೇಮ್ಜಿ ಫೌಂಡೇಶನ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.  

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಬಿಆರ್ ಕಾಲೇಜಿನ ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ್, ಗಾಂಧೀಜಿಯವರ ತತ್ವ, ಆದರ್ಶ ಹಾಗೂ ರಾಷ್ಟ್ರೀಯತೆಯ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.  

ವಿದ್ಯಾರ್ಥಿಗಳು ಡ್ರಾಯಿಂಗ್ ಶೀಟ್ನಲ್ಲಿ ಪೆನ್ಸಿಲ್ನಿಂದ ಗಾಂಧೀಜಿಯವರ ಸರಳ ರೇಖಾಚಿತ್ರ, ಗಾಂಧೀಜಿ ಚರಕದಲ್ಲಿ ನೂಲು ತೆಗೆಯುತ್ತಿರುವ ಚಿತ್ರ, ‘ಸ್ವಚ್ಛ ಭಾರತ’ ಪರಿಕಲ್ಪನೆಯ ಚಿತ್ರ ಸೇರಿದಂತೆ ವಿವಿಧ ಭಾವಚಿತ್ರಗಳನ್ನು ಬಿಡಿಸಿದರು.  

ಗಾಂಧೀಜಿ ಜಯಂತಿ ಅಂಗವಾಗಿ ಅ.2ರಂದು ಗಾಂಧೀಜಿ ಭಾವಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ್ ತಿಳಿಸಿದರು. 


ಸುದ್ದಿ ಓದಿ