ಹೂವಿನ ಹಡಗಲಿ

ಅನಂತನಾಥ ಸ್ವಾಮಿ ನೌಂಪಿ ಪೂಜಾ ಮಹೋತ್ಸವ

ಅನಂತನಾಥ ಸ್ವಾಮಿ ನೌಂಪಿ ಪೂಜಾ ಮಹೋತ್ಸವ


ಹೂವಿನಹಡಗಲಿ:ಸೆ.25- ಶ್ರೀ ಪಾಶ್ರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ  ಮಾನವರ ಆತ್ಮ ಕಲ್ಯಾಣ ಹಾಗೂ ಶುದ್ಧೀಕರಣಕ್ಕಾಗಿಪೂಜಾ ಮಹೋತ್ಸವ ಶುಕ್ರವಾರ ಸಡಗರ ಭಕ್ತಿ ಪ್ರಧಾನವಾಗಿ ಜರುಗಿತು. ಜೈನರ ಪವಿತ್ರ ಹಬ್ಬವಾದ ದಶಲಕ್ಷಣ ಮಹಾ ಪರ್ವದ ಹತ್ತನೇ ದಿನ ಹದಿ ನಾಲ್ಕನೇ ದಿನ ತೀರ್ಥಂಕರ ಅನಂತನಾಥ ಸ್ವಾಮಿಯ ಅನಂತ ಚತುರ್ದಶಿ ನೌಂಪಿ ವ್ರತ ಹಾಗೂ ಪೂಜಾ ಮಹೋತ್ಸವ ವೈಭವದಿಂದ ಜರುಗಿತು. ಪೂಜಾ ವ್ರತಿಕರು ಭಕ್ತಿ ಶ್ರದ್ದೆಯಿಂದ ಅನಂತ ನೌಂಪಿ ಆರಾಧನೆ ಮಾಡುತ್ತಿದ್ದಾರೆ. ಜೈನಸಮಾಜದ ಅಧ್ಯಕ್ಷರಾದ ಪ್ರಶಾಂತ್ ಎಚ್ ಎಸ್ ಮಾತನಾಡಿ ಜಿನಬಸದಿಯಲ್ಲಿ ಭಗವಾನ್ ಅನಂತಸ್ವಾಮಿ ಆರಾಧನೆಯಿಂದ ನಾಡಿಗೆ ಅನಂತ ಸುಖ, ಸಮೃದ್ಧಿ ಲಭಿಸಲಿ.ಆರಾಧನೆ ವ್ರತಿಕರಿಗೆ, ಶ್ರಾವಕ, ಶ್ರಾವಕಿಯರಿಗೆ ಆತ್ಮವಿಕಾಸಗೊಳ್ಳಲಿ ಭ ಅನಂತನಾಥರ ಪ್ರಕಾಶಮಾನ ಗುಣಗಳು ಹೊರಹೊಮ್ಮಲ್ಲಿ ಎಂದು ಹೇಳಿದರು.ಪಟ್ಟಣದ ಶ್ರಾವಕರು ಶ್ರಾವಕಿ ಯವರು ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿ ಪುಣ್ಯಭಾಗಿಯಾದರು. 


ಸುದ್ದಿ ಓದಿ