ಮೆಡಿಕಲ್ ಬಡ ವಿದ್ಯಾರ್ಥಿಗೆ ಧನಸಹಾಯ
ಹೂವಿನಹಡಗಲಿ, ಸೆ.25: ತಾಲೂಕಿನ ಹೊಳಲು ಗ್ರಾಮದ ಬಡ ವಿದ್ಯಾರ್ಥಿ ಭರತ್ ಕಣವಿ ಅವರು ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಆರ್.ಎಸ್. ಬಸವರಾಜ ಅವರು ?50,100 ಧನಸಹಾಯ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವರಡ್ಡಿ, ಉಪಾಧ್ಯಕ್ಷ ಹಣ್ಣಿ ಶಶಿಧರ, ಎಚ್. ಪೂಜಪ್ಪ, ಎನ್.ಟಿ. ಲಿಂಗರಾಜ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎ.ಕೊಟ್ಟೂರು ಗೌಡ ಅವರು ಆರ್.ಎಸ್. ಬಸವರಾಜ ನೀಡಿದ ಧನಸಹಾಯದ ಹಣವನ್ನು ಭರತ್ ಕಣವಿ ಅವರಿಗೆ ಹಸ್ತಾಂತರಿಸಿದರು.