ಬಳ್ಳಾರಿ

ವಿದ್ಯಾಸಾಗರ ವಸತಿ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ

ವಿದ್ಯಾಸಾಗರ ವಸತಿ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ

  ಲೋಕದರ್ಶನ ವರದಿ 

ಕಂಪ್ಲಿ 23: ತಾಯಂದಿರು ಮಕ್ಕಳಿಗೆ ತಪ್ಪದೇ ಶಾಲೆಗೆ ಕಳುಹಿಸುವುದರ ಜೊತೆಗೆ ಕಡ್ಡಾಯವಾಗಿ ಶಿಕ್ಷಣ ಕೂಡಿಸಿ .ವಿದ್ಯಾರ್ಥಿಗಳು ಎಂದಿಗೂ ಗುರುಗಳು ಹೇಳಿದ ಆದರ್ಶ ನುಡಿಗಳನ್ನ ಮರೆಯಬಾರದು ಎಂದು ಇಲ್ಲಿನ ವಿದ್ಯಾ ಸಾಗರ ಆಂಗ್ಲಮಾಧ್ಯಮ ವಸತಿ ಶಾಲೆ ಪ್ರಾಚಾರ್ಯ ಪಿ.ನಾಗೇಶ್ವರರಾವ್ ಹೇಳಿದರು. 

ಇಲ್ಲಿನ21ನೇವಾರ್ಡಿನ ಸಕ್ಕರೆಕಾರ್ಖಾನೆ ಕಾಳಿಕಾದೇವಿ ಗುಡಿ ಹಿಂಭಾಗದಲ್ಲಿ ನಿರ್ಮಿಸಿದ ನವಭಾರತ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವವಿದ್ಯಾ ಸಾಗರ ಆಂಗ್ಲಮಾಧ್ಯಮ ವಸತಿ ಶಾಲೆ ನೂತನ ಶಾಲಾ ಕಟ್ಟಡ ಉದ್ಘಾಟನಾ.ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳನ್ನ ಗೌರವಿಸಿ ಮಾತನಾಡಿ, ಹಳೆ ವಿದ್ಯಾರ್ಥಿಗಳು ಎಷ್ಟೇ ಸಾಧನೆ ಮಾಡಿದರೂ, ಎಷ್ಟೇ ಹಣ, ಅಧಿಕಾರ ಸಂಪಾದಿಸಿದರೂ ಗುರುಗಳು ಬೋಧಿಸಿದ ಆಚಾರ ವಿಚಾರ, ಸಂಸ್ಕೃತಿ ಮತ್ತು ಮಾನವೀಯತೆಯನ್ನು ನಿತ್ಯ ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕ ಜೆ.ಎನ್‌.ಗಣೇಶ್ ಮಾತನಾಡಿ, ಶಾಲಾ ಕಟ್ಟಡದಲ್ಲಿ ಆಧುನಿಕ ಗ್ರಂಥಾಲಯ, ಪ್ರಾಯೋಗಾಲಯ, ಕ್ರೀಡಾಂಗಣ, ಬೋಧನಾ ಕೊಠಡಿಗಳು ಮಾದರಿಯಾಗಿವೆ ಸತತವಾಗಿಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ 16ವರ್ಷಗಳಿಂದ ನಿರಂತರ ಶೇ.100ಫಲಿತಾಂಶ ಪಡೆಯುವ ಮೂಲಕ ವಿದ್ಯಾಸಾಗರ ಶಾಲೆ ಪಟ್ಟಣದಲ್ಲಿ ಉತ್ತಮ ಹೆಸರು ಗಳಿಸಿದೆಎಂದರು ಹಳೆ ವಿದ್ಯಾರ್ಥಿಗಳಿಂದ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಪ್ರಾಚಾರ್ಯ ಪಿ.ನಾಗೇಶ್ವರರಾವ್, ಉಪ ಪ್ರಾಚಾರ್ಯ ಪಿ.ಸಾಯಿ ಕಿಶೋರ್, ಶಿಕ್ಷಕ ವೃಂದದವರನ್ನ ಗೌರವಿಸಿದರು. ಶಾಸಕ ಜೆ.ಎನ್‌.ಗಣೇಶ್, ಬಿಇಓ ಪಿ.ಸುನಂದಾ, ಸಿಓ ಎನ್‌.ಶಿವಲಿಂಗಪ್ಪ, ಪ್ರಮುಖರಾದ ಟಿ.ಕೊಟ್ರೇಶ್, ಪೂರ್ಣಚಂದ್ರಿಕಾ, ರೋಹಿಣಿ, ಗಾಯತ್ರಿ, ಸೀತಾರಾಮ್, ಶ್ರೀನಿವಾಸರಾವ್, ಪಿ.ಅರ್ಜುನರಾವ್ ಇತರರಿದ್ದರು. 


ಸುದ್ದಿ ಓದಿ