ತಾಳಿಕೋಟಿ

ನಡಹಳ್ಳಿ ಇದ್ದರೆ ವಿಧಾನಸೌಧಕ್ಕೆ ಶೋಭೆ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ನಡಹಳ್ಳಿ ಇದ್ದರೆ ವಿಧಾನಸೌಧಕ್ಕೆ ಶೋಭೆ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ತಾಳಿಕೋಟೆ28:ವಿಧಾನ ಸೌಧದಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಅಂತ ಹುಟ್ಟು ಹೋರಾಟಗಾರ ಅವಶ್ಯಕ. ಮುದ್ದೇಬಿಹಾಳ ಮತಕ್ಷೇತ್ರದ ಜನತೆ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದ ರಾಜವಾಡೆಯಲ್ಲಿ ಬಿಜೆಪಿ ಬೃಹತ್ ರೋಡ್ ಶೋಗೆ ಚಾಲನೆ ನೀಡಿ ಮಾತನಾಡಿದರು.

ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿಗೆ ಹಗಲೀರುಳು ದುಡಿದ ವ್ಯಕ್ತಿ ಎ.ಎಸ್.ಪಾಟೀಲ ನಡಹಳ್ಳಿ ಅವರಾಗಿದ್ದಾರೆ. ಅವರು ನನ್ನ ಬಳಿ ಅನುದಾನದ ಪೈಲ್ ಹಿಡಿದುಕೊಂಡೇ ಬರುತ್ತಿದ್ದರು. ನನ್ನ ಅವಧಿಯಲ್ಲಿ ಬಾಗ್ಯಲಕ್ಷ್ಮೀ ಯೋಜನೆ ತಂದು ಬಡ ಹೆಣ್ಣು ಮಕ್ಕಳಿಗೆ ಮದುವೆಗೆ ಲಕ್ಷಾಂತರ ಹಣ ಬರುವ ಹಾಗೇ ಮಾಡಿದ್ದೇನೆ. ರೈತರ ಪಂಪಸೇಟ್ಗಳಿಗೆ ಉಚಿತ ವಿದ್ಯುತ್ ನೀಡಿದ್ದೇನೆ. ಹಿಂದು ಮುಸ್ಲೀಂ ಒಂದೆ ತಾಯಿ ಮಕ್ಕಳೆಂದು ಬಾಳಬೇಕು ಎಂದು ಅಧಿಕಾರ ನಡೆಸಿದ್ದೇವೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಇದೇ ಅಪೇಕ್ಷೆಯನ್ನು ಹೊಂದಿದ್ದಾರೆ. ಹಿಂದೂ ಮುಸ್ಲಿಂ ಅಂತಾ ಯಾವುದೇ ಬೇಧ ಭಾವ ಇಲ್ಲ. ನಾವು ಕೊಟ್ಟ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಯಾವುದೇ ಬೇಧ ಮಾಡಿಲ್ಲ. ಮೋದಿ ಸರಕಾರ, ರಾಜ್ಯ ಸರಕಾರ ರಾಜ್ಯದ ಅಭಿವೃದ್ಧಿ ಮಾಡಿದೆ. ಮುಸ್ಲಿಂ ಬಾಂಧವರು ಎ.ಎಸ್.ಪಾಟೀಲ ನಡಹಳ್ಳಿಗೆ ಮತ ನೀಡಿ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ. ಎ.ಸ್ಪಾಟೀಲ ನಡಹಳ್ಳಿ ಅಂತ ವ್ಯಕ್ತಿ ನಿಮ್ಮ ಕ್ಷೇತ್ರಕ್ಕೆ ಸಿಕ್ಕಿರುವದು ನಿಮ್ಮೆಲ್ಲರ ಪುಣ್ಯವಾಗಿದೆ. ಎ.ಎಸ್.ಪಾಟೀಲ ನಡಹಳ್ಳಿ ಅವರು ವಿಧಾನ ಸೌಧದಲ್ಲಿ ಮಾತನಾಡಲು ನಿಂತರೆ ಎಲ್ಲರೂ ಅವರ ಮಾತುಗಳನ್ನು ಕೇಳುತ್ತಾರೆ. ನಡಹಳ್ಳಿ ಇದ್ದರೆ ವಿಧಾನ ಸೌಧಕ್ಕೆ ಶೊಭೆಯಾಲಿದೆ. ಅಂತಹ ವ್ಯಕ್ತಿಯನ್ನು ಗೆಲ್ಲಿಸಿ ಅಭಿವೃದ್ಧಿಯನ್ನು ಮುಂದುವರೆಸಿ ಎಂದರು.

ಮುದ್ದೇಬಿಹಾಳ ಶಾಸಕ, ಬಿಜೆಪಿ ಅಭ್ಯರ್ಥಿ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಬೃಹತ್ ರೋಡ ಶೋ ನಡೆಸಲಾಯಿತು. ರಾಜವಾಡೆಯಿಂದ ಆರಂಭವಾದ ರೋಡ ಶೋ ಕತ್ರಿ ಬಜಾರ, ವಿಠ್ಠಲ ಮಂದಿರ, ಶಿವಾಜಿ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಸಂಗಮೇಶ್ವರ ಸಭಾಭವನಕ್ಕೆ ಆಗಮಿಸಿ ಮುಕ್ತಾಯವಾಯಿತು.

 ಬಿಜೆಪಿ ಮುಖಂಡರಾದ ಮಲಕೇಂದ್ರಾಯಗೌಡ ಪಾಟೀಲ, ಮಂಗಳಾದೇವಿ ಬಿರಾದಾರ, ಹೇಮರೆಡ್ಡಿ ಮೇಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣನವರ, ನಗರ ಘಟಕ ಅಧ್ಯಕ್ಷ ರಾಘವೇಂದ್ರ ಚವ್ಹಾಣ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಡಿ.ವಿ.ಪಾಟೀಲ, ಜೈಸಿಂಗ ಮೂಲಿಮನಿ, ಮುದಕಪ್ಪ ಬಡಿಗೇರ, ರಾಘವೇಂದ್ರ ವಿಜಾಪೂರ, ಶಿವಶಂಕರ ಹಿರೇಮಠ, ರಾಜುಗೌಡ ಗುಂಡಕನಾಳ,  ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ