ಹಗರಿಬೊಮ್ಮನಹಳ್ಳಿ

ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನ ಜೀವನ ಅಸ್ತವ್ಯಸ್ತ: ವೆಂಕಟೇಶ್

ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನ ಜೀವನ ಅಸ್ತವ್ಯಸ್ತ: ವೆಂಕಟೇಶ್

ಹಗರಿಬೊಮ್ಮನಹಳ್ಳಿ 25: ಲಾಕ್ ಡೌನ್ ಸಂಕಷ್ಟದ ಬೆನ್ನಲ್ಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ವೆಂಕಟೇಶ್ ಹೇಳಿದರು. 

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡ ತೈಲ ಬೆಲೆ, ಲಾಕ್ ಡೌನ್‌ನಲ್ಲಿ ಬಾಧಿತ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುಲ್ಲಿ ಸರ್ಕಾರ ವಿಫಲವಾಗಿರುವುದರ ವಿರುಧ್ಧ ಪ್ರತಿಭಟಸಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಮಾನ್ಯರ ಕಣ್ಣೊರೆಸುವ ಕೆಲಸ ಮಾಡಬೇಕು ಅದನ್ನು ಬಿಟ್ಟು ಮೇಲಿಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಎರಿಕೆಯಿಂದ ಸಾಮಾನ್ಯರನ್ನು ಕಡೆಗಾಣುತ್ತಿದ್ದಾರೆ, ಕರೋನಾ ಮಾಹಾಮಾರಿಗೆ ದುಡಿಯುವ ಕೈ ಕಳೆದುಕೊಂಡ ಕುಟುಂಬಗಳಿಗೆ 5ಲಕ್ಷ ಪರಿಹಾರ ನೀಡಬೇಕು,ಪ್ರಧಾನಿಗಳ ಸಲಹೆಯಂತೆ ಪಕೋಡ ಮಾರಿ ಜೀವನ ನಡೆಸಲು ಇಂದು ಅಡುಗೆ ಎಣ್ಣೆ ಗಗನಕ್ಕೇರಿದೆ, ಕೇಂದ್ರ ಸರಕಾರ ಬರೊಬ್ಬರಿ 23ಬಾರಿ ಪೆಟ್ರೋಲ್ ದರ ಏರಿಕೆ ಮಾಡಿದೆ. 

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಜನ ಸಾಮಾನ್ಯರ ಮೇಲೆ ಪದೇ ಪದೇ ಬೆಲೆ ಎರಿಕೆಯ ಬರೆ ಹಾಕುತ್ತಾ ಕಷ್ಟದ ಕೂಪಕ್ಕೆ ತಳ್ಳಿದೆ. ಕರೋನ ಸಂಕಷ್ಟದಲ್ಲಿ ಹೇರಿದ್ದ ಲಾಕ್‌ಡೌನ್ ರೈತರನ್ನು ಪಾತಾಳಕ್ಕೆ ನೂಕಿದೆ, ಬೆಳೆದ ಬೆಳೆ ಹೊಲದಲ್ಲಿಯೇ ಕೊಳೆತ ಹೋಗಿದೆ, ಕಟಾವಾದ ಬೆಳೆಗಳು ಮಾರುಕಟ್ಟೆಗೆ ಕಾಣದೇ ಹಾಳಾಗಿವೆ ಇಂತಹ ಪರಿಸ್ಥಿತಿ ಎದುರಿಸುತ್ತಿರವ ಬೆನ್ನಲ್ಲೆ ವಿದ್ಯುತ್ ದರ ಏರಿಕೆಯು ಸಾಮಾನ್ಯರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಈ ಕೋಡಲೇ ಏರಿಕೆಯಾದ ಬೆಲೆಗಳನ್ನು ಸಾಮಾನ್ಯರ ಸುಗಮ ಜೀವನಕ್ಕೆ ಹೊಂದಿಕೊಂಡಂತೆ ಬೆಲೆಗಳ ಇಳಿಕೆ ಮಾಡಬೇಕು,ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಇಲ್ಲದಿದ್ದರೆ ಪಕ್ಷವು ಹೋಬಳಿ ಮಟ್ಟದಿಂದ ಪ್ರಾರಂಭಿಸಿ ರಾಜ್ಯ ಮಟ್ಟದ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಲಾಗುವದೆಂದು ಎಚ್ಚರಿಸಿದರು. 

ತಾ.ಅದ್ಯಕ್ಷ ವೈ.ಮಲ್ಲಿಕಾರ್ಜುನ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಪರ ನಿಲ್ಲಬೇಕು, ಇಂದು ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಗೊಬ್ಬರಗಳ ಬೆಲೆ ಹೆಚ್ಚಾಗಿವೆ, ತೈಲ, ವಿದ್ಯುತ್, ಅಡುಗೆ ಎಣ್ಣೆ ಸೇರಿದಂತೆ ಉಪಯುಕ್ತ ವಸ್ತುಗಳ ಬೆಲೆ ಹೆಚ್ಚಾಗಿದ್ದು ಸಾಮಾನ್ಯರ ಜೀವನ ದುಸ್ತರವಾಗಿದೆ ಕೂಡಲೇ ದರಗಳ ಇಳಿಕೆಗೆ ಮುಂದಾಗಿ ಸಾಮಾನ್ಯರ, ರೈತ ಪರ ಯೋಜನೆಗಳತ್ತ ಹೆಜ್ಜೆ ಹಾಕುವಂತೆ ಹಾಕಬೇಕು. 

ರೈತಪರ ಕೆಲಸಗಳನ್ನು ಮಾಡುವ ಭರವಸೆ ನೀಡಿದ ಬೆಜೆಪಿ ಸರಕಾರ ಭರವಸೆಯನ್ನು ಹುಸಿ ಮಾಡಿದೆ, ದೇಶದ ಬೆನ್ನೆಲುಬು,ಅನ್ನದಾತ ಮಾತಿಗಷ್ಟೇ ಸೀಮಿತವಾಗಿದ್ದು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಬಳಸುತ್ತಿರುವುದು ದೇಶದ ದುರ್ದೈವ ಎಂದರು. 

ಮ.ಪ್ರಧಾನ ಕಾರ್ಯದರ್ಶಿ ಸುಭಾನ್ ಸಾಹೇಬ್, ಡಿಶ್ ಪಾಂಡು, ಇಕ್ಬಾಲ್ ಖಾಜಿ, ನಜೀರ್,ಬಾಳಪ್ಪ, ಹಬೀಬ್, ರಾಮಪ್ಪ, ವಕೀಲ ಕೊಟ್ರೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ