ವೇಮನ ಅದ್ಬುತವಾದ ತತ್ವಜ್ಞಾನಿ: ಶಾಸಕ ಎಚ್.ಕೆ.ಪಾಟೀಲ
ಮುಂಡರಗಿ : ವೇಮನ ಅದ್ಬುತವಾದ ತತ್ವಜ್ಞಾನಿಯಾಗಿದ್ದು ಯೋಗಿ ವೇಮನ ಸಾಹಿತ್ಯ ನುಡಿಗಳು ಭಾರತಕ್ಕೆ ಭಾಷಾಂತಾರ ಮಾಡುವ ಮೂಲಕ ಅವರ ವಿಚಾರಧಾರೆಗಳನ್ನು ಗುರ್ತಿಸಲು ಸಾಧ್ಯವಾಯಿತು ಎಂದು ಮಾಜಿ ಸಚಿವರು ಹಾಗೂ ಗದಗ ಹಾಲಿ ಶಾಸಕ ಎಚ್.ಕೆ.ಪಾಟೀಲ ತಿಳಿಸಿದರು.
ಪಟ್ಟಣದ ಹೆಸರೂರು ರಸ್ತೆಯಲ್ಲಿನ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಕಳಸಾರೋಹಣ ಹಾಗೂ ದಿ.ಶ್ರೀ ಶಿವಪ್ಪ ಮಲ್ಲಪ್ಪ ಮೇಟಿ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ವೇಮನ ಅದ್ಯಯನ ಪೀಠದ ಜೊತೆಗೆ ಯೋಗಿ ವೇಮನ ಎಂದು ಗುರ್ತಿಸಲು ವಿಳಂಬವಾಗಿದ್ದರೂ ಎಸ್.ಆರ್.ಪಾಟೀಲ ಅವರ ಸತತ ಪ್ರಯತ್ನದ ಮೂಲಕ ಸಮಾಜಕ್ಕೆ ಅವರ ಕೊಡುಗೆ ಅಫಾರವಾಗಿದೆ ಎಂದು ಸ್ಮರಿಸಿದರು.
ಈಡೀ ಮನಕುಲಕ್ಕೆ ಒಳ್ಳೆಯ ಮಾರ್ಗದರ್ಶನ ನೀಡುವ ಮೂಲಕ ರಡ್ಡಿ ಸಮಾಜ ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದರಿಂದ ಭೂಮಿ ತಾಯಿಯೇ ರಡ್ಡಿ ಜನಾಂಗಕ್ಕೆ ಉಣಬಡಿಸುವಳು ಎನ್ನುವ ವಿಚಾರದಲ್ಲಿ ರಡ್ಡಿ ಜನಾಂಗ ಬದುಕುತ್ತಿದ್ದಾರೆ ಎಂದರು.
ಸಮಾಜದ ಸಂಘಟನೆಯ ಜೊತೆಗೆ ರಚನಾತ್ಮಕ ಕಾರ್ಯದಲ್ಲಿ ಪಾಲ್ಗೊಂಡು ಬರುವ 2025 ರ ಹೇಮರಡ್ಡಿ ಮಲ್ಲಮ್ಮ ಹಾಗೂ ಯೋಗಿ ವೇಮನ ಜಯಂತಿಗೆ ಸಮುಧಾನ ಭವನ ನಿರ್ಮಿಸುವಲ್ಲಿ ಶ್ರಮಿಸಬೇಕು ಜೊತೆಗೆ ರಾಜ್ಯ ಸಭಾ ಸದಸ್ಯರೊಂದಿಗೆ ಹಾಗೂ ಚರ್ಚಿಸಿ 25 ಲಕ್ಷ ಸಮುದಾಯ ಭವನ ನಿರ್ಮಾಣಕ್ಕೆ ಅನುಧಾನ ಕಲ್ಪಿಸಿಕೊಡಲಾಗವುದು ಎಂದು ತಿಳಿಸಿದರು.
ವೇ.ಮೂ.ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸಿ ಮಾತನಾಡಿ ಹೇಮರಡ್ಡಿ ಮಲ್ಲಮ್ಮ ಕಲಿಯುಗದ ಕಾಮದೇನು ಕಲ್ಪವೃಕ್ಷ ಇದ್ದ ಹಾಗೇ, ಪಂಡಿತ ಪುಟ್ಟರಾಜ ಗವಾಯಿಗಳ ನಾಟ್ಯ ಸಂಘದಿಂದ ಹೇಮರಡ್ಡಿ ಮಲ್ಲಮ್ಮನ ನಾಟಕ ಪ್ರದರ್ಶನ 365 ದಿನಗಳನ್ನು ಪ್ರದರ್ಶನಗೊಂಡಿದ್ದು ಇದರಿಂದ ಬಂದ ಆದಾಯದಿಂದ ಶ್ರೀಮಠದಿಂದ ಜಮೀನು ಖರೀದಿಸಿ ಅದರಲ್ಲಿ ವಿವಿಧ ಬಗೆಯ ದವಸ ದಾನ್ಯಗಳನ್ನು ಬೆಳೆದು ಆಶ್ರಮ ಮಕ್ಕಳಿಗೆ ಉಪಹಾರ, ಉಟಕ್ಕಾಗಿ ಬಳಕೆಯಾಗುತ್ತಿದೆ ಪ್ರತಿಯೊಬ್ಬರು ಇಂತಹ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಸಂಸ್ಕಾರದ ಜೊತೆಗೆ ಸಂಸ್ಕ್ರತಿಯನ್ನು ಅಳವಡಿಸಬೇಕೆಂದು ತಿಳಿಸಿದರು.
ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ ಕಮೀಟಿ ಡಾ.ಬಸವರಾಜ ಮೇಟಿ ಅಧ್ಯಕ್ಷತೆ ವಹಿಸಿದ್ದರು.
ವೀರಪಾಪೂರದ ಗುರುಮುದಕೇಶ್ವರ ಶಿವಾಚಾರ್ಯರು, ಹಾಗೂ ಹಿರೆವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯ, ಲಡ್ಡುಮುತ್ಯಾ ಸಾನಿದ್ಯ ವಹಿಸಿದ್ದರು.
ಟ್ರಸ್ಟ್ ಕಮೀಟಿ ಸಹಕಾರ್ಯದರ್ಶಿ ಎಸ್.ಆರ್.ಬಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರೋ.ವೀರಣ್ಣ ಮೇಟಿ ಸ್ವಾಗತಿಸಿ ಶಿಕ್ಷಕ ವಿಶ್ವನಾಥ ಕಳಕರಡ್ಡಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಡಿ.ಆರ್.ಪಾಟೀಲ್, ಬಿ.ಆರ್.ಯವಗಲ್ಲ್, ರಾಮಕೃಷ್ಣ ದೊಡ್ಡಮನಿ,ವಾಸಣ್ಣ ಕುರಡಗಿ, ವಿಜಯಕುಮಾರ ಬಣಕಾರ, ಎ.ಬಿ.ಚನ್ನಳ್ಳಿ, ಸುರೇಶ ಅಬ್ಬಿಗೇರಿ, ಉಮೇಶ ಚನ್ನಳ್ಳಿ, ಅಂದಪ್ಪ ಗಡ್ಡದ, ವಿಶ್ವನಾಥಗೌಡ ಪಾಟೀಲ್, ವಿರುಪಾಕ್ಷಪ್ಪ ಶಿಂಗನಾಳ, ಶೋಭಾ ಮೇಟಿ ಅಂದಾನಪ್ಪ ಮೇಟಿ, ವೈ.ಎಸ್.ಮೇಟಿ, ಶಿವಪ್ಪ ಚಿಕ್ಕಣ್ಣವರ, ಟಿ.ಬಿ.ಮೇಟಿ, ರವಿ ಮೂಲಿಮನಿ, ಸುಭಾಷರಡ್ಡಿ ಹಳ್ಳಿಗುಡಿ, ಅಂದಪ್ಪ ಗಡ್ಡದ, ಪರಸರಡ್ಡಿ ಗೋಡಚಿಹಳ್ಳಿ, ಮಲ್ಲಪ್ಪ ನಾಯ್ಕರ ಉಮೇಶ ಚನ್ನಳ್ಳಿ, ಶರತ ಮೇಟಿ, ರವೀಂದ್ರ ಪಾಟೀಲ, ಭರತ ಮೇಟಿ, ಸೇರಿದಂತೆ ಇತರರಿದ್ದರು.