ವಾಹನ ಡಿಕ್ಕಿ: ವಿದ್ಯುತ್ ಕಂಬ ಜಖಂ
ಲೋಕದರ್ಶನ ವರದಿ
ಮರಿಯಮ್ಮನಹಳ್ಳಿ 17: ಮರಿಯಮ್ಮನಹಳ್ಳಿ ಸಮೀಪದ ರಾಮದೇವ್ ಡಾಬಾ ಬಳಿಯ ಬಿಎಂಎಂ ಕಾರ್ಖಾನೆಯ ಪಾರ್ಕಿಂಗ್ ಸ್ಥಳದಲ್ಲಿದ್ದ ವಿದ್ಯುತ್ ಕಂಬಕ್ಕೆ ಭಾರಿ ಗಾತ್ರದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ ಕಂಬ ಸಂಪೂರ್ಣ ಮುರಿದ ಘಟನೆ ಜರುಗಿದೆ. ಈ ಘಟನೆ ನಡೆದ ಹತ್ತಿರದಲ್ಲಿಯೇ ಪಂಚರ್ ಶಾಪ್ ಹಾಗೂ ಹೋಟೆಲ್ಗಳು ಇದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಪಟ್ಟಣದ ವಿದ್ಯುತ್ ಮುಖ್ಯ ಕೇಂದ್ರದಿಂದ ಡಣಾಪುರ, ಹನುಮನಹಳ್ಳಿ ಮತ್ತು ಗಾಳೆಮ್ಮನಗುಡಿ ಗ್ರಾಮಗಳಿಗೆ ಸರಬರಾಜು ಮಾಡುವ 11 ಕೆವಿ ಎಚ್.ಟಿ ವಿದ್ಯುತ್ ಲೈನ್ ಕಂಬ ಇದಾಗಿದೆ. ಇದನ್ನು ಹೊರತು ಪಡಿಸಿಯೂ ಹಲವು ಮಾರ್ಗದ ವಿದ್ಯುತ್ ಕಂಬಗಳು ಈ ಸ್ಥಳದಲ್ಲಿ ಹಾದು ಹೋಗಿದ್ದು ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳು ಸುರಕ್ಷತೆಯನ್ನು ಕೈಗೊಳ್ಳ ಬೇಕು ಎಂಬುದು ಸಾರ್ವಜನಿಕರ ಕಳಕಳಿ.