ಶಿಗ್ಗಾವ್

ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ

ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ

ಶಿಗ್ಗಾವಿ 27:  "ನಮ್ಮ ಓಬವ್ವ ನಮ್ಮ ಹೆಮ್ಮೆ, ನಮ್ಮ ಓಬವ್ವ ಜಗತ್ತಿನ ಹೆಮ್ಮೆ, ನಮ್ಮ ಸಂವಿಧಾನ ನಮ್ಮ ಹೆಮ್ಮೆ, ನಮ್ಮ ಸಂವಿಧಾನದರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಮಾನವಕುಲದ ಹೆಮ್ಮೆ, ಅವರಜೀವನವೆ ನಮ್ಮ ಬದುಕಿನದಾರಿ."ಎಂದು ಮಾನವ ಹಕ್ಕುಗಳ ಹಾಗೂ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಷತಾ ಕೆ ಸಿ  ಹೇಳಿದರು. 

ಪಟ್ಟಣದ ಕಛೇರಿ ಮೈದಾನದಲ್ಲಿ ನಡೆದ ಛಲವಾದಿ ಮಹಾಸಭಾ ವತಿಯಿಂದ ನಡೆದ ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒನಕೆ ಓಬವ್ವ ತಾಯಿಯ ಇತಿಹಾಸ ಧೈರ್ಯ ಸಾಹಸ ಸಮಾಜಕ್ಕೆ ನೀಡಿದ ಸಂದೇಶ,ಮಹಿಳಾ ಜಗತ್ತಿನ ಶ್ರೇಷ್ಠ ಮಹಿಳೆಯಾದ ಓಬವ್ವನ ಮುಚ್ಚಿಟ್ಟ ಇತಿಹಾಸ, ಸರಕಾರ ಗಮನ ಹರಿಸಬೇಕಾದ ಕ್ರಮಗಳ ಕುರಿತು ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಶ್ರೇಷ್ಠ ಸಂವಿಧಾನ ಕುರಿತು, ನಮಗಾಗಿ ಬಾಬಾ ಸಾಹೇಬರು ಪಟ್ಟ ಕಷ್ಟಗಳ ಕುರಿತು, ಸದ್ಯದ ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ಇರುವ ಸವಾಲುಗಳ ಬಗ್ಗೆ ಮತ್ತು ಅದರ ರಕ್ಷಣೆ ಕುರಿತು ನಾವು  ಮಾಡಬೇಕಾಗಿರುವ  ಕ್ರಮಗಳ ಬಗ್ಗೆ ಹಾಗೂ ಮಧ್ಯ ಮತ್ತು ಮೂಢನಂಬಿಕೆಗಳ ಕುರಿತು ಉಪನ್ಯಾಸ ನೀಡಿದರು. 

ಸಂಗನಬಸವ ಶ್ರೀಗಳು, ಮಾಜಿ ಲೋಕಸಭಾ ಸದಸ್ಯ ಮಂಜುನಾಥ ಕುನ್ನೂರ್, ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನ ಮರದ ಸರ್, ಮಾಜಿ ಶಾಸಕ ಅಜ್ಜಂಪೀರ್‌ಖಾದ್ರಿ ಸರ್, ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಟಿ ಎಮ್ ಭಾಸ್ಕರ್ ಹಾಗೂ ಸಮಾಜದ ಮತ್ತು ವಿವಿಧ ಸಂಘಟನೆಗಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು. 


ಸುದ್ದಿ ಓದಿ