ಶ್ರದ್ಧೆ ಭಕ್ತಿಯಿಂದ ವೀರಭದ್ರೇಶ್ವರ ಜಯಂತಿ ಆಚರಣೆ
ಬಳ್ಳಾರಿ 14: ವೀರಶಿವನಿಂದಲೇ ವೀರಶೈವ ಧರ್ಮ ಹುಟ್ಟುಲು ಕಾರಣರಾದ ವೀರಭದ್ರೇಶ್ವರ ಜಯಂತಿ ಪ್ರಯುಕ್ತ ದಿ. 14ರಂದು ನಗರದ ದುರುಗಮ್ಮ ದೇವಸ್ಥಾನದ ಹತ್ತಿರ ಗಂಗಾ ಪೂಜೆಯನ್ನು ನೆರವೇರಿಸಿ ಐದು ಕಳಸದೊಂದಿಗೆ ಐವತ್ತಕ್ಕು ಹೆಚ್ಚು ಮುತೈದೆಯರಿಂದೊಡಗೂಡಿದ ಕಳಸದೊಂದಿಗೆ ಹಾಗೂ ಸಕಲ ಸಂಗೀತ ಮತ್ತು ಜನನಪದ ವಾದ್ಯಗಳಾದ ಸಮಾಳ ಮತ್ತು ಡೋಲುಗಳೊಂದಿಗೆ ವೀರಭದ್ರೇಶ್ವರ ಬಾವಚಿತ್ರ ವಿಜ್ರಂಭಣೆಯೊಂದಿಗೆ ಮೆರವಣಿಗೆಯು ತಾಳೂರು ರಸ್ತೆಯ ಮೂಲಕ ಬಸವ ಭವನದ ಹತ್ತಿರವಿರುವ ಅನಾದಿಲಿಂಗೇಶ್ವರ ದೇವಸ್ಥಾನ ತಲುಪಿ ಅಭಿಷೇಕ, ಮಹಾ ಮಂಗಳಾರತಿ ಮತ್ತು ಸಕಲ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ನೆರೆದ ಭಕ್ತರಿಗೆ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಜಯಂತಿ ಕಾರ್ಯಕ್ರಮದ ಸಾನಿಧ್ಯವನ್ನು ಹರಗಿನಢೋಣಿ ಅಭಿನವ ಸಿದ್ಧಲಿಂಗಮಹಾಸ್ವಾಮಿ ಗಳು ಮತ್ತು ಕಮ್ಮರಚೇಡು ಕಲ್ಯಾಣಮಠದ ಕಲ್ಯಾಣ ಸ್ವಾಮಿಗಳುವಹಿಸಿದ್ದರು. ಈ ಮೆರವಣಿಗೆಯಲ್ಲಿ ಬಳ್ಳಾರಿ ನಗರದ ಮತ್ತು ಸುತ್ತ ಮುತ್ತಲ ಗ್ರಾಮಗಳ ನೂರಾರಾ ವೀರಶೈವ ಭಕ್ತಾದಿಗಳು ಭಾಗವಹಿಸಿ ಆಶೀರ್ವಾದವನ್ನು ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾದರು.