ಬಳ್ಳಾರಿ

ರಾಘವ ಕಲಾ ಮಂದಿರದಲ್ಲಿ ವೀರ ಅಶ್ವತ್ಥಾಮ, ಪೌರಾಣಿಕ ನಾಟಕ ಪ್ರದರ್ಶನ

ರಾಘವ ಕಲಾ ಮಂದಿರದಲ್ಲಿ ವೀರ ಅಶ್ವತ್ಥಾಮ, ಪೌರಾಣಿಕ ನಾಟಕ  ಪ್ರದರ್ಶನ

ಬಳ್ಳಾರಿ 30: ಶುಕ್ರವಾರ ದಿನದಂದು ಶ್ರೀ ಮಾರುತಿ ತೊಗಲು ಗೊಂಬೆ ಕಲಾ ಟ್ರಸ್ಟ್‌ (ರಿ) ಬಳ್ಳಾರಿ ಇವರು ಆಯೋಜಿಸಿದ್ದ. ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಅಂಗವಾಗಿ. ನಗರದ ರಾಘವ ಕಲಾ ಮಂದಿರದಲ್ಲಿ ವೀರ ಅಶ್ವತ್ಥಾಮ ಎಂಬ ಪೌರಾಣಿಕ ನಾಟಕ ಜಿ. ನಾಗನಗೌಡ ಕಲಾ ತಂಡದಿಂದ ಪ್ರದರ್ಶನಗೊಂಡಿತು. ಭರತನಾಟ್ಯ. ಕುಮಾರಿ ಅಭಿನಯ ಇವರಿಂದ ವಚನ ಗಾಯನ. ಶರಣಯ್ಯ ಸ್ವಾಮಿ ಸಿದ್ದರಾಂಪುರ ಇವರಿಂದ ನೆರವೇರಿತು. ಕಾರ್ಯಕ್ರಮ ಉದ್ಘಾಟನೆ ಟಿಎಚ್‌ಎಂ ಬಸವರಾಜ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರು ಬಳ್ಳಾರಿ. ಇವರು ನೆರವೇರಿಸಿ. ಕಲಾವಿದರ ಕಲೆಯನ್ನು ಆರಾದ್ಯ ದೈವದಂತೆ ಸ್ವೀಕರಿಸಿ ಸದಾ ಪೋಷಿಸಿ ಬೆಳಸಿ ಮುಂದಿನ ಪೀಳಿಗೆಗೆ ಉಳಿಸುವದು ಹಿರಿಯರಾದ ನಮ್ಮ ಕರ್ತವ್ಯ ಕಲಿತು ಕಲೆಯನ್ನು ಮೈಗೂಡಿಸಿಕೊಂಡು ಹೋಗುವದು ಕಿರಿಯರ ಕರ್ತವ್ಯ. ನಮ್ಮ ಬಳ್ಳಾರಿಯಲ್ಲಿ ಗುರು- ಶಿಷ್ಯ ಪರಂಪರೆ ಹೀಗೆ ಮುಂದುವರೆದಿದೆ. ರಾಘವರ ಶಿಷ್ಯ ಜೋಳದರಾಶಿ ದೊಡ್ಡನಗೌಡರು ಅವರ ಶಿಷ್ಯ, ಸಿಡಗಿನ ಮೊಳ ಚಂದ್ರಯ್ಯ ಅವರ ಶಿಷ್ಯ, ಬೆಳಗಲ್ಲು ವೀರಣ್ಣ. ಅವರ ಶಿಷ್ಯ. ನಮ್ಮ ತಿಪ್ಪೆಸ್ವಾಮಿ, ಹೀಗೆ ಪರಂಪರೆ ಮುಂದುವರೆಸಿಕೊಂಡು ಹೋಗುವದು ಸಂತಸದ ಸಂಗತಿ. ಕಲಾವಿದರಿಗೆ ಆರ್ಥಿಕ ಸಹಾಯ. ಧನಿಕರಿಂದ ಕಲಾಪೋಷಕರಿಂದ  ಕಲಾಸಕ್ತರಿಂದ ಇಂದಿನ ದಿನಮಾನದಲ್ಲಿ ಅಗತ್ಯ ಇವರಿಗೆ ಸೂಕ್ತ ಸ್ಥಾನಮಾನ ಇಲಾಖೆ ಕಲ್ಪಿಸಲಿ, ಕಲಾವಿದರ ಕುಂದುಕೊರತೆ ನಿವಾರಿಸಲಿ ಎಂದರು. 

ಕಾರ್ಯಕ್ರಮದಲ್ಲಿ ಅತಿಥಿಗಳಾದ  ಸಿದ್ದೇಶ ಬಳ್ಳಾರಿ ಜಿಲ್ಲಾ ವಸ್ತುವಾರಿ ಸಚಿವರ ಆಪ್ತರು. ಮಾತನಾಡಿ ರೋಮಾಂಚನವಾದ ರಕ್ತರಾತ್ರಿ. ದಿ.ಹನುಮಂತರಾಯ ವಿರಚಿತವಾದದ್ದು. ಅವರ ಕೊಡುಗೆ ರಂಗಭೂಮಿಗೆ ಅಗಮ್ಯ ಆದರೆ ಕಥೆ ರಚಿಸಿದವರ ಜೀವನ ಬಡತನದ ಶೋಚನೀಯ. ಅವರು ಇರದಿದ್ದರು ಅವರ ಕೃತಿ ಅಮರ ನಿರಂತರವಾಗಿ ಉಳಿಸಿದ ಕಲಾವಿದರಿಗೆ ನನ್ನದೊಂದು ಸಲಾಂ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್?  ಶಾಮಪ್ಪ ವ್ಯವಸ್ಥಾಪಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಳ್ಳಾರಿ. ಇವರು ಮಾತನಾಡಿ. ಬಳ್ಳಾರಿ ಜಿಲ್ಲೆಯಲ್ಲಿ ಮಹನೀಯರ ಜನ್ಮ ತಾಳಿದ ಪುಣ್ಯಭೂಮಿ ಕಲೆ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ತವರೂರು.ದಿ. ಬೆಳಗಲ್ ವೀರಣ್ಣನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆಯನ್ನು ಗುರುತಿಸಿಕೊಟ್ಟವರು ಅಂತವರ ನಿಟ್ಟಿನಲ್ಲಿ ಕಂದಗಲ್ ಹನುಮಂತರಾಯರ ರಕ್ತರಾತ್ರಿ ಕುರುಷೇತ್ರ ನಾಡಿಗೆ ನೀಡಿದ ನಾಟಕಗಳು 70 ವರ್ಷ ಕಳೆದರೂ ಕುಗ್ಗದಲೆ - ಮುನ್ನುಗ್ಗುತ್ತಿದೆ ಎಂದರೆ ಅವರ ಕೃತಿಗೆ ಎಷ್ಟು ಅವರ ವಾದದು ಎಂದು ಸ್ಮರಿಸಿದರು. ಬಯಲಾಟ ಕಲಾವಿದರಾಗಿ ಗುರಿತಿಸಿಕೊಂಡು 800 ಬಯಲಾಟಗಳ ಪ್ರದರ್ಶನ ನಡೆಸಿದ ತಿಪ್ಪ ಸ್ವಾಮಿಯವರು ಈ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ರಕ್ತರಾತ್ರಿ ನಾಟಕಕ್ಕೆ ಪ್ರವೇಶ ಮಾಡಿದ್ದು ಬಳ್ಳಾರಿ ಜಿಲ್ಲೆಗೆ ರಂಗಭೂಮಿಗೆ ಒಬ್ಬ ಹಾರ್ಮೋನಿಯಂ ವಾದಕ ಸಿಕ್ಕಿದ್ದು ಬಳ್ಳಾರಿ ಜನತೆಗೆ ಸಂತಸದ ವಿಷಯ ಒಬ್ಬರಿಂದ ಒಬ್ಬರಿಗೆ ಕಲೆ ಹಸ್ತಾಂತರವಾಗಬೇಕು ಮಣ್ಣಲ್ಲಿ ಮಣ್ಣಾಗಬಾರದು ಎಂದರು. ಟ್ರಸ್ಟ್‌ ಅಧ್ಯಕ್ಷರಾದ ಸಬ್ಬಣ್ಣ ವಂದನಾರೆ​‍್ಣ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ  ಟಿ ಹೊನ್ನೂರ​‍್ಪ ಪ್ರಭಾರಿ ನಿರ್ದೇಶಕರು ಕ.ಮ.ಸ. ಇ. ಬಳ್ಳಾರಿ ಇವರು ಕಲಾವಿದ ಮೂರು ತಿಂಗಳ ಮಾಶಾಸನ. ಇನ್ನು ಮೂರು ದಿನದೊಳಗಾಗಿ ಅವರ ಖಾತೆಗೆ ಜಮೆಯಾಗಲಿದೆ. ಕಲಾವಿದರಿಗೆ ಆಯಾ ಜಿಲ್ಲೆಗೆ ಸರ್ಕಾರ ಎಸ್‌ಸಿ, ಎಸ್‌ಟಿ ಕೋಟಾದಲ್ಲಿ ಪ್ರಾಯೋಜನೆ ಕಾರ್ಯಕ್ರಮದ ಹಣ ಬಿಡುಗಡೆಯಾಗಿದ್ದು ಕಲಾವಿದರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್‌ಎನ್‌ವಿಜೆ ಕಾಟನ್ ಮಿಲ್ ಬಿ ಎಮ್ ಬಸವರಾಜ ಉಪಸ್ಥಿತರಿದ್ದರು. 


ಸುದ್ದಿ ಓದಿ