ಬಳ್ಳಾರಿ

ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ

ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ 

ಬಳ್ಳಾರಿ 15: ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸಿಬ್ಬಂದಿಗಳ ಕುಟುಂಬದವರಿಗೆ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 


ಈ ಪ್ರಯುಕ್ತ ಇಂದು ನಮ್ಮ ಹಬ್ಬ 2022 ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಸಿದ ಅಭ್ಯರ್ಥಿಗಳಿಗೆ ಬಹುಮಾನ ಪ್ರದಾನ ಸಮಾರಂಭವನ್ನು ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದಿ. 14ರಂದು ಆಯೋಜಿಸಲಾಗಿತ್ತು.  


ಕಾರ್ಯಕ್ರಮದಲ್ಲಿ ಕನ್ನಡ ವಿದ್ಯಾಲಯದ ಕಾರ್ಯಕಾರಣಿ ಸದಸ್ಯ  ಜೈ ಭೀಮ್ ಕಟ್ಟಿ, ಮಾನ್ಯ ಕುಲಪತಿಗಳಾದ ಡಾ. ಸ.ಚಿ. ರಮೇಶ, ಮಾನ್ಯ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ, ಭಾಷಾ ನಿಕಾಯ ಡೀನರಾದ ಡಾ. ವೀರೇಶ ಬಡಿಗೇರ, ಸಮಾಜವಿಜ್ಞಾನಗಳ ನಿಕಾಯದ ಡೀನರಾದ ಡಾ. ವಾಸುದೇವನ್, ಲಲಿತಾ ಕಲೆಗಳ ನಿಕಾಯದ ಡೀನರಾದ ಡಾ. ಕೆ .ರವೀಂದ್ರನಾಥ್, ವಿಜ್ಞಾನಗಳ ನಿಕಾಯದ  ಡೀನರಾದ ಡಾ. ಮಾಧವ ಪೆರಾಜೆ, ಕ್ರೀಡಾಕೂಟದ ಸಂಚಾಲಕರಾದ ಡಾ.ಎಫ್‌.ಟಿ ಹಳ್ಳಿಕೆರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕರಾದ ಡಾ.ಹೆಚ್‌.ಡಿ ಪ್ರಶಾಂತ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು,  ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ