ಗುರುಪೂರ್ಣಿಮೆ ಉತ್ಸವ ನಿಮಿತ್ತ ವಿವಿಧ ಧಾರ್ಮಿಕ ಪೂಜಾ ಕಾರ‌್ಯಕ್ರಮ
ಮುಂಡರಗಿ 14: ಪಟ್ಟಣದ ಶಿರಡಿ ಸಾಯಿಬಾಬಾ ದೇವಸ್ಥಾನಲ್ಲಿ ಬುಧವಾರ ಗುರುಪೂರ್ಣಿಮೆ ಉತ್ಸವ ನಿಮಿತ್ತ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.
ಬೆಳಗ್ಗೆ ಕಾಕಡಾರತಿ, ಮಂಗಲಸ್ನಾನ ಆರತಿ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಕುಂಕಮಾರ್ಚನೆ, ದುಪಾರ್ಚನೆ, ಸರ್ವಸೇವಾ ಸಾಯಿ ಮೂರ್ತಿಗೆ ಅಲಂಕಾರ, ಸತ್ಯನಾರಾಯಣ ಪೂಜೆ, ನವಗ್ರಹ ಶಾಂತಿ ಹೋಮ, ಶನಿಶಾಂತಿ ಹೋಮ, ಮಧ್ಯಾಹ್ನ ನೈಮೇದ್ಯ, ಮಹಾಪ್ರಸಾದ, ಸಂಜೆ ದೂಪಾರತಿ, ಶೇಜಾರತಿ ಸೇರಿ ಮೊದಲಾದ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ವಿಶ್ವನಾಥಭಟ್ ಜೋಷಿ ಹಾಗೂ ಅರ್ಚಕ ಜಯಣ್ಣ ಪಾಶಿ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.
ಸುಮಾ ಕುಂಬಾರ, ಸಂಜನಾ ಕಪಟಕರ್, ಶ್ವೇತಾ ವಾಚದಮಠ, ಸುರೇಶ ಬೋಸ್ಲೆ, ಅನಿಲ ಹಳ್ಳಿಕೇರಿ, ಶೈಲಾ ನಾವಡೆ, ಹುಲಿಗೆಮ್ಮ ಭಜಂತ್ರಿ ಸ್ಮರಿತಾ ಮೊಡ್ಲೇರ್, ಶ್ರೀವಿದ್ಯಾ ಕೆ, ಶ್ರೀದೇವಿ ಪೆನಮತ್ಸ್, ರತ್ನಾಬಾಯಿ ಕಪಟಕರ್, ಉಮಾ ಜಾಗಟಗೇರಿ, ಲಕ್ಷ್ಮೀ ಇಂದ್‌ಕೋರ್, ಸುರೇಶ ಕಾಂಬಳೆ ಇತರರು ಇದ್ದರು.