ಲೇಖನಗಳು

ಗಣಪತಿಯ ವಿವಿಧ ಅವತಾರಗಳು

ಗಣಪತಿಯ ವಿವಿಧ ಅವತಾರಗಳು

ಗಣಪತಿಯ ವಿವಿಧ ಅವತಾರಗಳಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ 32 ಅವತಾರಗಳಲ್ಲಿ ಗಣಪತಿ ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನು ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.

1. ಬಾಲ ಗಣಪತಿ: ಹೆಸರೇ ಸೂಚಿಸುವಂತೆಗಣಪತಿಯ ಎಳೆಯ ಮಗುವಿನ ರೂಪ. ಇದುಗಣೇಶನ ಬಾಲ್ಯದ ಸುಂದರವಾದ ಮತ್ತು ಮುದ್ದಾದರೂಪವಾಗಿದೆ.

2. ತರುಣಗಣಪತಿ : ಇದು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವರೂಪವಾಗಿದೆ. ಇದು 8 ಹಸ್ತಗಳನ್ನು ಮತ್ತು ವಕ್ರದಂತವನ್ನು ಹೊಂದಿರುತ್ತದೆ.

3. ಭಕ್ತಿಗಣಪತಿ: ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿ ಅವತಾರವೇ ಭಕ್ತಗಣಪತಿ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿ ಇರುತ್ತದೆ.

4. ವೀರಗಣಪತಿ: ಈ ಅವತಾರದಲ್ಲಿ ಗಣಪತಿಯ ಕೈಗಳಲ್ಲಿ 16 ಆಯುಧಗಳನ್ನು ತೋರಿಸಲಾಗುತ್ತದೆ.  ಗಣಪತಿಯ ಈ 'ವೀರ' ಅವತಾರವು ಯುದ್ಧಕ್ಕೆ ಸನ್ನದ್ದವಾಗಿರುವ ರೀತಿಯಲ್ಲಿಕಾಣಿಸುತ್ತದೆ.

5. ಶಕ್ತಿ ಗಣಪತಿ : ಈ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಅವನ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಕುಟುಂಬವನ್ನು ಕಾಪಾಡುವ ಶಕ್ತಿ ಎಂದು ಗಣೇಶನನ್ನುಪೂಜಿಸಲಾಗುತ್ತದೆ.

6. ದ್ವಿಜಗಣಪತಿ: ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿದ ನಂತರಕೊಲ್ಲಲ್ಪಟ್ಟು ಆ ಮೇಲೆ ಪುನ: ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

7. ಸಿದ್ಧಿ ಗಣಪತಿ: ಈ ಗಣಪತಿಯನ್ನುಯಶಸ್ಸು ಮತ್ತು ಸಂಪತ್ತಿನ ಸಲವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂತರ್ಿಯು ಹಳದಿ ಬಣ್ಣದಲ್ಲಿರುತ್ತದೆ.

8.ಉಚ್ಚಿಷ್ಟಗಣಪತಿ: ಈ ಗಣಪತಿಯು ಹಲವು ಕೈಗಳಿಂದ ಸುಂದರವಾಗಿಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದುಕೈಯಲ್ಲಿ ವೀಣೆಯಂತಹ ಸಂಗಿತ ವಾದ್ಯಗಳನ್ನು ಹಿಡಿದಿರುತ್ತಾನೆ.

9. ವಿಘ್ನಗಣಪತಿ: ಗಣಪತಿಯನ್ನು ವಿಘ್ನೇಶ್ವರ, ವಿಘ್ನನಾಶಕಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವಎಲ್ಲಾ ಕಂಟಕಗಳನ್ನು ನಿವಾರಿಸುತ್ತದೆ.

10. ಕ್ಷಿಪ್ರಗಣಪತಿ: ಕೆಂಪು ವರ್ಣದ ಈ ಗಣಪತಿಯ ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

11. ಹೇರಂಭಗಣಪತಿ :ಈ ಗಣಪತಿದೀನರನ್ನುಉದ್ಧಾರ ಮಾಡಲು ಅವತರಿಸಿದ್ದಾನೆ. ಈತನಿಗೆ 5 ತಲೆಗಳು ಇದ್ದು ಸಿಂಹದ ವಾಹನವನ್ನು ಹೊಂದಿರುವ ಅವತಾರ ಇದಾಗಿದೆ.

12. ಲಕ್ಷ್ಮೀಗಣಪತಿ: ಈ ಗಣಪತಿಯನ್ನು ಸಹೋದರಿ-ಸಹೋದರರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯು ಸಂಪತ್ತು ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

13.ಮಹಾಗಣಪತಿ: ಮಹಾ ಎಂದರೆ ಶ್ರೇಷ್ಠ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು ಶಕ್ತಿಸಂಪನ್ನನಾಗಿಇಲ್ಲಿ ಕುಳಿತಿರುತ್ತಾನೆ.

14. ವಿಜಯಗಣಪತಿ: ಹೆಸರೇ ಸೂಚಿಸುವಂತೆ ಈ ಗಣಪತಿ ವಿಜಯದ ಸಂಕೇತವಾಗಿದೆ.ಈತನಿಗೆ ನಾಲ್ಕು ಕೈಗಳು ಇದ್ದು ಮೂಷಕ ವಾಹನನಾಗಿ ಕಾಣಿಸುತ್ತಾನೆ.

15.ನೃತ್ಯಗಣಪತಿ: ತನ್ನ ಅಗಾಧ ದೇಹದ ಹೊರತಾಗಿಯು ನೃತ್ಯವನ್ನು ಮಾಡುವ ಭಂಗಿಯಲ್ಲಿಇಲ್ಲಿಗಣಪತಿ ಕಾಣಿಸಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೇ ಇರುವವರುಯಾರಿದ್ದಾರೆ?

16. ಊಧ್ರ್ವಗಣಪತಿ: ಊಧ್ರ್ವಎಂದರೆಲಂಬವಾಗಿ ಇರುವಗಣಪತಿಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಿಸುವಗಣಪತಿಯಂತೆಕಾಣುತ್ತಾನೆ. ಈತನಕೈಯಲ್ಲ್ತಿ, ಭತ್ತ, ನೈದಿಲೆ, ಕಬ್ಬಿನ ಜಲ್ಲ್ಲೆಗಳನ್ನು ನಾವು ಕಾಣಬಹುದು.

17. ಏಕಾಕ್ಷರಗಣಪತಿ :ಹೆಸರೇ ಸೂಚಿಸುವಂತೆ'ಒಂದಕ್ಷರದಗಣಪತಿಯಾಗಿರುತ್ತಾನೆ. ಇವನು ಕೆಂಪು ಬಣ್ಣದಲ್ಲಿದ್ದು ಮೂಷಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

18. ವರದಗಣಪತಿ:ತಮಗೆ ಇಷ್ಟವಾಗುವ ವರವನ್ನು ಬೇಡಲು ಈ ಗಣೇಶನನ್ನು ಭಕ್ತರು ಪೂಜಿಸುತ್ತಾರೆ. ಈತನಿಗೆ ಮೂರನೇಕಣ್ಣುಇದೆ.ಇದುಜ್ಞಾನವನ್ನು ಪ್ರತಿನಿಧಿಸುತ್ತದೆ.

19. ತ್ರಯಾಕ್ಷರಗಣಪತಿ: ಇದು ಮೂರಕ್ಷರದ ಗಣಪತಿಯಾಗಿದ್ದು ಕೈಯಲ್ಲಿ ತನ್ನ ಪ್ರೀತಿಯ ಸಿಹಿಯಾದ ಮೋದಕವನ್ನು ಹಿಡಿದು ಸೇವಿಸುತ್ತಿರುವುದನ್ನು ಕಾಣಬಹುದು.

20. ಕ್ಷಿಪ್ರಪ್ರಸಾದಗಣಪತಿ: ಈ ಗಣಪತಿನಿಮ್ಮಕೋರಿಕೆಯನ್ನುಅತಿ ಶೀಘ್ರದಲ್ಲಿಯೇ ಪೂರ್ಣಗೊಳಿಸುತ್ತಾನೆಂಬ ಭಾವನೆ ಭಕ್ತರಲ್ಲಿದೆ.

21. ಹರಿದ್ರಗಣಪತಿ :ಈ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದರಾಜಠೀವಿಯಿಂದಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

22. ಏಕದಂತಗಣಪತಿ :ಈ ಗಣಪತಿಯು ಏಕ ದಂತವನ್ನು ಹೊಂದಿದ್ದು ನೀಲಿಬಣ್ಣದಿಂದಕೂಡಿರುತ್ತಾನೆ.

23. ಸೃಷ್ಟಿ ಗಣಪತಿ: ಈ ಗಣನಾಥನ ವಾಹನ ಮೂಷಕವಾಗಿದ್ದು, ಒಳ್ಳೆಯ ಮೂಡ್ನಲ್ಲಿ ಗಣೇಶನು ಇಲ್ಲಿಕಾಣಿಸಿಕೊಳ್ಳುತ್ತಾನೆ.

24. ಉದ್ದಂಡಗಣಪತಿ: ಇಲ್ಲಿ ಗಣಪತಿಯು ವಿಶ್ವದಲ್ಲಿ ಧರ್ಮವನ್ನು ಪರಿಪಾಲಿಸುತ್ತಾನೆ. ಈ ಗಣಪತಿಯು 10 ಕೈಗಳನ್ನು ಹೊಂದಿದ್ದು ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

25. ಋಣಮೋಚನಗಣಪತಿ :ಈ ಗಣಪತಿಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

26. ದುಂಧಿಗಣಪತಿ : ಈ ಗಣಪತಿಯು ಕೆಂಪು ವರ್ಣದಲ್ಲಿದ್ದು ಕೈಗಳಲ್ಲಿ ರುದ್ರಾಕ್ಷಿ ಮಾಲೆಯನ್ನು ಹೊಂದಿರುತ್ತಾನೆ.

27. ದ್ವಿಮುಖಗಣಪತಿ : ಹೆಸರೇ ಸೂಚಿಸುವಂತೆ ಈ ಗಣಪತಿ ಎರಡು ತಲೆಗಳನ್ನು ಹೊಂದಿದ್ದು, ಎರಡೂ ಕಡೆಗೂ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.

28. ತ್ರಿಮಖ ಗಣಪತಿಳ: ಈ ಗಣಪತಿ ಮೂರು ಮುಖಗಳನ್ನು ಹೊಂದಿದ್ದು,ಚಿನ್ನದಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.

29. ಸಿಂಹ ಗಣಪತಿ : ಗಣೇಶನು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.

30. ಯೋಗಗಣಪತಿ : ಈ ಗಣಪತಿ ಪದ್ಮಾಸನದಲ್ಲಿ ಕುಳಿತು ಧ್ಯಾನಯೋಗದಲ್ಲಿ ನಿರತನಾಗಿರುವಂತೆಕಾಣುತ್ತಾನೆ.

31. ದುಗರ್ಾಗಣಪತಿ: ಈ ಅವತಾರವುಗಣಪತಿಯ ವಿಶೇಷಅವತಾರವಾಗಿದ್ದು, ಈ ಅವತಾರ ದಲ್ಲಿ ಗಣೇಶನುಮಾತೆಯಾದ ದುಗರ್ಾದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.

32. ಸಂಕಷ್ಟ ಹರಗಣಪತಿ: ಗಣೇಶನ ಈ ಅವತಾರವು ಮಾನವಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.

ಗಣೇಶೋತ್ಸವದಲ್ಲಿ ಗಣೇಶನ ಮೂತರ್ಿಯನ್ನು ಮಣ್ಣಿನಿಂದ ತಯಾರಿಸಿ, ಅದಕ್ಕೆ ಬಣ್ಣವನ್ನು ಹಚ್ಚಿ ಶೃಂಗಾರ ಮಾಡುತ್ತಾರೆ. ನಂತರ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕೆಲವು ದಿನಗಳವರೆಗೆ ಪೂಜಿಸಿದ ನಂತರಗಣಪನ ವಿರ್ಸಜನೆ ಮಾಡುವರು. ಆಧ್ಯಾತ್ಮಿಕ ಜ್ಞಾನದಲ್ಲಿ ದೇಹವನ್ನು ಮಣ್ಣಿಗೆ ಹೋಲಿಸಲಾಗುತ್ತದೆ. ಈ ದೇಹವು ಪಂಚತತ್ವಗಳಿಂದ ಆಗಿದ್ದು, ಮತ್ತೆ ಪಂಚತತ್ವಗಳಲ್ಲಿ ಲೀನವಾಗುತ್ತದೆ. ಇದರ ಪ್ರತೀಕವಾಗಿಯೇ ಗಣೇಶನನ್ನು ಮಣ್ಣಿನಿಂದ ತಯಾರಿಸಿ ಮತ್ತೆ ಮಣ್ಣಿಗೆ ಸೇರಿಸಲಾಗುತ್ತದೆ. ನಾವು ಈ ದೇಹವಲ್ಲ, ನಾವು ಆತ್ಮ-ಜ್ಯೋತಿಗಳಾಗಿದ್ದೇವೆ. ನಮಗೆ ಜಾತಿಭೇದಗಳಿಲ್ಲ. ನಾವೆಲ್ಲರೂ ದಿವ್ಯಗುಣಗಳ ಶೃಂಗಾರ ಮಾಡಿಕೊಂಡಾಗ ಪೂಜೆಗೆ ಯೋಗ್ಯರಾಗುವೆವು. ಪಂಚ ವಿಕಾರಿಗುಣಗಳ ತ್ಯಾಗದಿಂದ ಮಾತ್ರ ದಿವ್ಯಗುಣಗಳ ಶೃಂಗಾರ ಮಾಡಿಕೊಳ್ಳಲು ಸಾಧ್ಯವಿದೆ.  ಬ್ರಹ್ಮಚಾರಿ ವಿನಾಯಕನಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಪತ್ನಿಯರನ್ನು ತೋರಿಸಲಾಗುತ್ತದೆ. ವಾಸ್ತವಿಕವಾಗಿ ಇವರೆಬ್ಬರೂ ಗಣೇಶನ ವಿಶಾಲ ಬುದ್ಧಿ ಮತ್ತು ಸಿದ್ಧಿಯ ಪ್ರತೀಕವಾಗಿದ್ದಾರೆ.

ನಮ್ಮ ಜೀವನವು ಗಣಪತಿಯಂತೆ ನಾಲ್ಕು ದಿನಗಳ ಬಾಳು. ಆದ್ದರಿಂದ ಈ ಅಲ್ಪ ಸಮಯದಲ್ಲಿ ಗಣೇಶನಂತೆ ಜೀವನದಲ್ಲಿ ಗುಣಗಳನ್ನು ಅಳವಡಿಸಿಕೊಂಡು ನಮ್ಮ ಜೀವನವನ್ನು ಸುಖ-ಸಮೃದ್ಧಿಯಿಂದ ನಿವರ್ಿಘ್ನ ಮಾಡಿಕೊಳ್ಳೋಣ.

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ!

ನಿವರ್ಿಘ್ನಂಕುರುಮೇದೇವ ಸರ್ವಕಾಯರ್ೇಷು ಸರ್ವದ!!

- ವಿಶ್ವಾಸ ಸೋಹೋನಿ

ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,

ಮೊ.734963253 

ಸುದ್ದಿ ಓದಿ