ಆಯುರ್ವೇದಿಕ್ ಓಷಧಿ ಸೇವನೆಯಿಂದ ವಿವಿಧ ಕಾಯಿಲೆಗಳನ್ನು ನಿವಾರಿಸಬಹುದು: ಅಮರಜ್ಯೋತಿ
ಮುಂಡರಗಿ 29: ಪ್ರತಿಯೊಬ್ಬರ ಆರೋಗ್ಯಕ್ಕೆ ಬೇಕಾದ ವ್ಯಾಯಾಮ, ದ್ಯಾನ ಸಾಧನೆಯ ಅಗತ್ಯತೆಯ ಜೊತೆಯಲ್ಲಿ ನೂರಾರು ಗಿಡಮೂಲಿಕೆಯಿಂದ ತಯಾರಿಸಲ್ಪಟ್ಟ ಆಯುರ್ವೇದಿಕ್ ಓಷಧಿ ಸೇವನೆಯಿಂದ ಮನುಷ್ಯನಲ್ಲಿರುವ ವಿವಿಧ ಕಾಯಿಲೆಗಳನ್ನು ನಿವಾರಿಸಬಹುದು ಎಂದು ಗುಲಬುರ್ಗಾ ಬುದ್ದಬೆಳಮಗಿಯ ಪೂಜ್ಯ ಭಂತೇ ಅಮರಜ್ಯೋತಿ ಹೇಳಿದರು.
ಪಟ್ಟಣದ ಪುರಸಭೆ ಆವರಣದ ಗಾಂದೀ ಭವನದಲ್ಲಿ ಶಿವಮೊಗ್ಗದ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಮುಂಡರಗಿ ತಾಲೂಕು ಘಟದಿಂದ ಏರಿ್ಡಸಿದ ವೈರಸ್ನಿಂದ ಬಂದಿರುವ ಸಾಂಕ್ರಾಮಿಕ ಡೆಂಗಿ ಜ್ವರಕ್ಕೆ ರೋಗ ನಿರೋಧಕ ಉಚಿತ ಆಯುರ್ವೇದಿಕ್ ಓಷಧಿ ವಿತರಣಾ ಹಾಗೂ ಕಣ್ಣಿನ ದೃಷ್ಟಿ ದೋಷ, ಕಣ್ಣಿನ ಪರಿಗಳಿಗೆ ಉಚಿತ ಓಷಧಿ ವಿತರಣಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಪ್ರತಿದಿನ ನಾವು ಸೇವನೆ ಮಾಡಿದ ಆಹಾರ ಕಲುಷಿತವಾಗಿರುವ ಕಾರಣ ಇಂದು ಆಸ್ಪತ್ರೆಯಲ್ಲಿ ಅತಿಯಾಗಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಭಾಗದ ಜನತೆಯ ತೋಟಗಾರಿಕೆಯ ಮಧ್ಯದಲ್ಲಿಯೇ ಕೆಲವು ಓಷದಿ ಸಸ್ಯಗಳನ್ನು ಕಾಣಬಹುದು, ಆಹಾರದ ಪದ್ಧತಿಯಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದ ಗಿಡಮೂಲಿಕೆಗಳ ಓಷದಿ ಪಾರಂಪರಿಕವಾದ ದಿವ್ಯ ಓಷದಿ ಸಸ್ಯವಾಗಿದೆ. ಹಿಂದಿನ ಕಾಲದ ಋಷಿಮುನಿಗಳು ಕೂಡಾ ಸೇವನೆ ಮಾಡಿ ತಮ್ಮ ಜೀವವನ್ನು ಕಾಪಾಡಿದ ಉದಾಹರಣೆಗಳನ್ನು ಬರಹ, ಕಥೆ ಹಾಗೂ ಪುಸ್ತಕಗಳಲ್ಲಿ ಓದಲಾಗಿದೆ. ಅದರಂತೆ ಈ ನಾಡಿನ ಜನರು ಪಕ್ಕದಲ್ಲಿರುವ ಕಪ್ಪತ್ತಗಿರಿ ಸಸ್ಯಕಾಶಿಯನ್ನು ಸದುಪಯೋಗ ಪಡೆದುಕೊಂಡು ಆರೋಗ್ಯವಂತ ನಗರಿ ಎಂಬ ಖ್ಯಾತಿಗೆ ಪಾತ್ರರಾಬಗೇಕೆಂದು ಹೇಳಿದರು.
ಈ ವೇಳೆ ಅ.ಕ.ಪಾ.ವೈ.ಪ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಪೂಜಾರ ಮಾತನಾಡಿ, ಸರ್ವರೋಗ ಸಂಜೀವಿನಿ ಎಂದೇ ಕರೆಯಲ್ಪಡುವ ಕಶಾಯ ಇದಾಗಿದೆ. ಈ ಆಯುರ್ವೇದ ಓಷದಿಯಿಂದ ಚಿಕನ್ನ ಗುನ್ಯಾ, ಡೆಂಗ್ಯೂ ಜ್ವರ ಹಾಗೂ ಇನ್ನಿತರೆ ಕಾಯಿಲೆಗಳನ್ನು ನಿವಾರಣೆ ಮಾಡುವಂತ ಶಕ್ತಿಯನ್ನು ಹೊಂದಿದೆ. ಈ ಓಷದಿಯನ್ನು ನಮ್ಮದೇ ತಾಲೂಕಿನ ಕಪ್ಪತ್ತಗುಡ್ಡ, ಹಾವೇರಿ ಹಾಗೂ ಶಿವಮೊಗ್ಗದ ಗುಡ್ಡದಲ್ಲಿ ಸಿಗುವ ಗಿಡಮೂಲಿಕೆಗಳಿಂದ ಇದೇ ಹಾಲ್ನಲ್ಲಿ ರಾತಿ ಈಡಿ ನುರಿತ ಪಾರಂಪರಿಕ ವೈಧ್ಯರಿಂದ ತಯಾರಿಸಿ ಕಶಾಯ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಸುಮಾರು 150 ರಿಂದ 200 ಜನತೆ ಈ ಆಯುರ್ವೇದಿಕ್ ಓಷದಿಯನ್ನು ಪಡೆದುಕೊಂಡಿದ್ದಾರೆ. ಇದನ್ನು ಸಾಯಂಕಾಲ 5 ಗಂಟೆಯವರೆಗೂ ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ವೈಧ್ಯ ಎಲ್.ರಾಜು ಪಂಡಿತ ವಹಿಸಿಕೊಂಡಿದ್ದರು. ಹಾಗೂ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಗದಗ ಜಿಲ್ಲಾ ಅಧ್ಯಕೆ ಶಿವಲೀಲಾ ಪಾಟೀಲ್, ಬಿ.ಕೆ.ಪಾಟೀಲ್, ಚಂದ್ರಕಾಂತ ಉಳ್ಳಾಗಡ್ಡಿ, ವಿಷ್ಣಪ್ಪ ಕೋಟಿಹಾಳ, ಲಕ್ಷ್ಮಣಶೆಟ್ಟಿ, ಕೃಷ್ಣಮೂರ್ತಿ, ಹರೀಶ ಗುನಗಾ, ನಿಂಗಪ್ಪ, ಬಿ.ಕೆ.ಪಾಟೀಲ, ವೆಂಕಟೇಶ ತಳವಾರ, ಬಸವಪ್ಪ ಹಾರೋಗೇರಿ ಹಾಗೂ ಇತರರು ಇದ್ದರು.