ಮುಂದಗೋಡ

ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಯಲ್ಲಿ ವನಮಹೋತ್ಸವ

ಜ್ಞಾನ ಪ್ರಜ್ಞಾ ಅಂದ ಮಕ್ಕಳ  ಶಾಲೆಯಲ್ಲಿ ವನಮಹೋತ್ಸವ

ಮುಂಡಗೋಡ 02:  ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಮುಂಡಗೋಡ ಘಟಕ ವತಿಯಿಂದ ನಗರದ ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ವನಮೋತ್ಸವ ಆಚರಣೆ ಮಾಡಲಾಯಿತು.  

ನಂತರ ಕಾಲೇಜು ವಿಧ್ಯಾರ್ಥಿಗಳಿಗೆ ಸಸಿಗಳನ್ನು ಪೋಷಿಸುವ ಜವಾಬ್ದಾರಿ ನೀಡಿ, ಭವಿಷ್ಯದಲ್ಲಿ ಅದಕ್ಕೆ ಪ್ರೋತ್ಸಾಹ ರೂಪಕವಾಗಿ ಬಹುಮಾನ ನೀಡುವ ಬಗ್ಗೆ ಫೋಷಣೆ ಮಾಡಲಾಯಿತು.  

ನಂತರ ಪಟ್ಟಣ ದೇಶಪಾಂಡೆ ನಗರದ ಜ್ಞಾನ ಪ್ರಜ್ಞಾ ಅಂದ ಮಕ್ಕಳ ಶಾಲೆಗೆ ಹೋಗಿ ಸಸಿ ನೆಟ್ಟ ನಂತರ  ಜ್ಞಾನ ಪ್ರಜ್ಞಾ ಅಂದ ಮಕ್ಕಳು ಭಕ್ತಿ ಗೀತೆಯನ್ನು ಹಾಡುವ ಹೇಳುವ  ಮೂಲಕ ಆಕರ್ಷಕವಾಗಿದ್ದವು  ನಂತರ ಮಕ್ಕಳಿಗೆ ಸಿಹಿಯನ್ನು ಹಂಚಿಕೆ ಮಾಡಲಾಯಿತು   

ಈ ವೇಳೆ  ಪತ್ರಕರ್ತರಾದ ಗಜೇಂದ್ರ ಕರ್ಜಗಿ ಮಂಜು ಮಿರಜಕರ ಸಚಿನ ಕೊರವರ ಶಿವರಾಜ ಶಿರಾಲಿ ಹಾಗೂ   ಕಾಲೇಜು ಪ್ರಾಂಶುಪಾಲರು ಉಪನ್ಯಾಸಕರು ಸಿಬ್ಬಂದಿ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು 


ಸುದ್ದಿ ಓದಿ