ವಾಲ್ಮೀಕಿ ಮಹರ್ಷಿ ಭಾವಚಿತ್ರ ಮೆರವಣಿಗೆ
ಲೋಕದರ್ಶನ ವರದಿ
ಕಂಪ್ಲಿ 20: ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಬಿ.ನಾರಾಯಣಪ್ಪ ಮಾತನಾಡಿ, ರಾಜ್ಯ ಸರ್ಕಾರ ಎಸ್ಟಿ ಸಮುದಾಯಕ್ಕೆ ಶೇ.7.5ಮೀಸಲಾತಿ ನೀಡಬೇಕು ಎಸ್ಟಿ ಸಮುದಾಯಕ್ಕೆ ಶೇ.7.5ಮೀಸಲಾತಿ ಅಗತ್ಯವಿದ್ದು ಸರ್ಕಾರ ನೀಡುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದಪುರಿ ಮಹಸ್ವಾಮಿಗಳ ಮಾರ್ಗದರ್ಶನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಎಂದರು ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ವಾಲ್ಮೀಕಿ ಸಮಾಜದಿಂದ ವಾಲ್ಮೀಕಿ ಮಹರ್ಷಿ ಭಾವಚಿತ್ರ ಮೆರವಣಿಗೆ ಜರುಗಿತು. ಕಳಸಧಾರತಿ, ಪೂರ್ಣಕುಂಭ, ಡೊಳ್ಳು, ತಾಷಾರಾಂಡೋಲ್, ಮಂಗಳವಾದ್ಯಗಳು ಪಾಲ್ಗೊಂಡಿದ್ದವು. ಗ್ರಾಮದ ವಾಲ್ಮೀಕಿ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಉಪತಹಸೀಲ್ದಾರ ಬಿ.ರವೀಂದ್ರಕುಮಾರ್, ಸಿಪಿಐ ಸುರೇಶ್ ಎಚ್.ತಳವಾರ್, ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ಮಹಾಸಭಾದ ನಗರ ಅಧ್ಯಕ್ಷ ಡಿ.ಯಲ್ಲಪ್ಪ, ಮುಖಂಡ ಡಾ.ವೆಂಕಟೇಶ್, ಎನ್.ರಾಮಾಂಜನೇಯಲು, ಎ.ಹುಲುಗಪ್ಪ, ಬಿ.ಅಂಬಣ್ಣ, ಮಾರೆಣ್ಣ, ರವಿ, ಕಿಶೋರ್, ನೀರಗಂಟಿ ವೀರೇಶ್, ಉಸ್ತಾದ್ ವೀರೇಶ್, ವಾಲ್ಮೀಕಿ ಈರಣ್ಣ, ಡಿ.ಈರಣ್ಣ, ಟಿ.ವಿ.ಸುದರ್ಶನ ರೆಡ್ಡಿ, ಯು.ರುದ್ರ್ಪ ಸೇರಿ ವಾಲ್ಮೀಕಿ ಸಮುದಾಯದವರಿದ್ದರು. ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ವಾಲ್ಮೀಕಿ ಸಮಾಜದಿಂದ ವಾಲ್ಮೀಕಿ ಮಹರ್ಷಿ ಭಾವಚಿತ್ರ ಮೆರವಣಿಗೆ ಜರುಗಿತು. ಕಳಸಧಾರತಿ, ಪೂರ್ಣಕುಂಭ, ಡೊಳ್ಳು, ತಾಷಾರಾಂಡೋಲ್, ಮಂಗಳವಾದ್ಯಗಳು ಪಾಲ್ಗೊಂಡಿದ್ದವು. ಗ್ರಾಮದ ವಾಲ್ಮೀಕಿ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.