ಶಿಗ್ಗಾವ್

ರಾಮಾಯಣ ಶ್ರೇಷ್ಠ ಕಾವ್ಯವಾಗಲು ವಾಲ್ಮೀಕಿಯವರ ಕೊಡುಗೆ ಅಪಾರ : ಅಂಬಿಗೇರ

ರಾಮಾಯಣ ಶ್ರೇಷ್ಠ ಕಾವ್ಯವಾಗಲು ವಾಲ್ಮೀಕಿಯವರ ಕೊಡುಗೆ ಅಪಾರ : ಅಂಬಿಗೇರ

ಶಿಗ್ಗಾವಿ 17 : ಪಟ್ಟಣದ ಅಂಬೇಡ್ಕರ್ ಆಡಳಿತ ಸಂಕೀರ್ಣ ಭವನದ ಕಾರ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕಿ ನಿರ್ದೇಶಕಿ ಸರಸ್ವತಿ ಗಜಕೋಶ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ, ಪ್ರಕಾಶ ಓಂಧಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ಅಂಬೇಡ್ಕರ್ ಮೂರ್ತಿಗೆ ಮಾಲಾಪರ್ಣೆಯನ್ನು ಮಾಡಿದರು. 

ನಂತರ ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ,  ಮಾತನಾಡಿ  ಭಾರತದ ಶ್ರೇಷ್ಠ ಮಾಹಾಕಾವ್ಯ ಕೃತಿಗೆ ಜನ್ಮ ನೀಡಿ ಜನತೆಗೆ ಉತ್ತಮ ಸಂದೇಶ ನೀಡಿದವರು. ರಾಮಾಯಣ ಶ್ರೇಷ್ಠ ಕಾವ್ಯವಾಗಲು ವಾಲ್ಮೀಕಿಯವರು ಕೊಡುಗೆ ಅಪಾರ ಅಲ್ಲದೇ  ಆದರ್ಶ ವ್ಯಕಿತ್ವವನ್ನು ಹೊಂದಿದ ವಾಲ್ಮೀಕಿಯವರು ಸಂದೇಶಗಳು ಇಡಿ ವಿಶ್ವಕ್ಕೆ ಮಾದರಿಯಾಗಿದ್ದಾವೆ ಹಾಗೂ ಒಳ್ಳೆಯ ಕೆಲಸ ಬೇಗನೆ ಮಾಡಬೇಕು ಕೆಟ್ಟ ಕೆಲಸಕ್ಕೆ ಸಮಯ ತೆಗೆದುಕೊಳ್ಳಬೇಕು. ವಾಲ್ಮೀಕಿಯವರ ಕೊನೆಯ ಆಸೆ ಸಮುದ್ರ ನೀರನ್ನು ಸಿಹಿ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೆ ಆಗಲಿಲ್ಲ ಎಂದು ಪರಿತಪಿಸಿದ್ದಾರೆ ಎಂದರು. 

ದಿಶಾ ಇಂಟರ್ನ್ಯಾಷನಲ್ ಶಾಲೆಯ ವಿಧ್ಯಾರ್ಥಿಗಳು ಛದ್ಮವೇಷ ರೂಪದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಗುರುನಗೌಡ ಪಾಟೀಲ, ವಾಲ್ಮೀಕಿ ಸಮಾಜದ ಮುಖಂಡರಾದ ಯಲ್ಲಪ್ಪ ತಳವಾರ, ಗದಿಗೆಪ್ಪ ಓಲೇಕಾರ, ಮಹಾದೇವಪ್ಪ ತಳವಾರ, ಬಸವರಾಜ ವಾಲ್ಮೀಕಿ, ಶಿವಾನಂದಓಲೇಕಾರ, ಕರೆಯಪ್ಪ ಕಟ್ಟಿಮನಿ, ಅಶೋಕ ಕಾಳೆ, ಪಕ್ಕೀರ​‍್ಪ ಕುಂದೂರ, ಮಹೇಶ ತಳವಾರ, ಆನಂದ ಕೆಳಗಿನಮನಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಗಣ್ಯಮಾನ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ