ವಾಜಪೇಯಿ ಜನ್ಮದಿನಾಚರಣೆ
ಮುಂಡಗೋಡ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ತಾಲೂಕು ಘಟಕದವರು ಇಲ್ಲಿನ ತಾಲೂಕಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿದರು.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಉಪಾಧ್ಯಕ್ಷ ಶ್ರೀಕಾಂತ ಸಾನು, ಸದಸ್ಯರಾದ ಫಣಿರಾಜ ಹದಳಗಿ, ಮಂಜುನಾಥ ಹರಮಲಕರ, ಸುವರ್ಣ ಕೊಟಗುಣಸಿ, ಸುನೀಲ ವೆರ್ಣೇಕರ, ವಿನಾಯಕ ರಾಯ್ಕರ, ವಿಠ್ಠಲ ಬಾಳಂಬೀಡ, ಭರತರಾಜ ಹದಳಗಿ, ತುಕಾರಾಮ ಇಂಗಳೆ, ಸಂಜೀವ ಪಿಶೆ, ವೀಣಾ ಓಶಿಮಠ ಹಾಗೂ ಮುಂತಾದವರು ಉಪಸ್ಥಿತರಿದ್ದರು.