ಬೈಲಹೊಂಗಲ

ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಲಸಿಕಾ ಅಭಿಯಾನ

ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಲಸಿಕಾ ಅಭಿಯಾನ

ಬೈಲಹೊಂಗಲ 30: ಲಸಿಕೆ ತೆಗೆದುಕೊಂಡ ವಿದ್ಯಾರ್ಥಿನಿಯರು ಆರೋಗ್ಯದ ಕಡೆಗೆ ಮತ್ತಷ್ಟು ಗಮನಕೊಟ್ಟು, ಪ್ರತಿಯೊಬ್ಬರೂ ತಪ್ಪದೆ ಆನ್ ಲೈನ ಕ್ಲಾಸಗಳಿಗೆ ಹಾಜರಾಗಿ ಮುಂಬರುವ ಪರೀಕ್ಷೆಗೆ ತಾವೆಲ್ಲರೂ ಸಿದ್ಧರಾಗಬೇಕೆಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸೋಮನಾಥ ಸೊಪ್ಪಿಮಠ ಹೇಳಿದರು.  

ಅವರು ಬುಧವಾರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿನಿಯರು ಆರೋಗ್ಯವಂತರಾಗಿರಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಕೊರೋನಾ ಮುಕ್ತ ಜೀವನ ನಡೆಸಲು ಲಸಿಕೆ ಅಮೂಲ್ಯವಾದ ಸಂಜೀವಿನಿಯಾಗಿದೆ ಎಂದರು. 

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಡಿವಾಳಪ್ಪ ಹೋಟಿ, ಸುಧೀರ ವಾಲಿ, ವಿದ್ಯಾ ರಾಮಣ್ಣವರ, ಪ್ರಭಾರಿ ಪ್ರಾಚಾರ್ಯ ಡಾ. ಎಫ್ ಡಿ ಗಡ್ಡಿಗೌಡರ ಇದ್ದರು. 

ತಾಲೂಕಾ ವೈದ್ಯಾಧಿಕಾರಿ ಡಾ. ಸಂಜಯ ಸಿದ್ದಣ್ಣವರ ಹಾಗೂ ಡಾ. ಕಿರಣ ಮೂಡಲಗಿ, ಭಾಗ್ಯಶ್ರೀ ಹುದ್ದಾರ, ಶ್ರೀಶೈಲ ಹಿರೇಮಠ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಿದರು. 

ಸಹಾಯಕ ಪ್ರಾಧ್ಯಾಪಕರಾದ ಡಾ.ವಿಶಾಲಾಕ್ಷಿ ಹೊನ್ನಾಕಟ್ಟಿ, ಪ್ರೊ. ಹೇಮಲತಾ ತೊರಗಲ್ಲ, ಬಿ.ಬಿ. ಪಾಟೀಲ,  ಡಿ.ಎಸ್‌. ಹಾಡಕರ, ಎಂ ಡಿ ಹಿರೇಮಠ, ಝಡ್‌. ಎಂ. ನನ್ನೆ, ಎಸ್‌.ಸಿ. ಪರಂಡಿ ಆರ್‌.ಎಸ್‌. ಹುಲಮನಿ, ರಾಜು ಬಡಿಗೇರ, ವ್ಹಿ.ಎಸ್‌. ಮಾಲಗತ್ತಿಮಠ ಉಪಸ್ಥಿತರಿದ್ದರು.  

ಪ್ರಸನ್ನಸಿಂಗ್ ಹಜೇರಿ ಸ್ವಾಗತಿಸಿ, ನಿರೂಪಿಸಿದರು. ಡಾ. ಅವಿನಾಶ ವಂದಿಸಿದರು.  ಬಿಎ, ಬಿ.ಕಾಂ, ಹಾಗೂ ಬಿಬಿಎ ಕ್ಲಾಸಿನ ಸುಮಾರು 120 ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡರು. 


ಸುದ್ದಿ ಓದಿ