ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ
ಲೋಕದರ್ಶನ ವರದಿ
ಮುಂಡಗೋಡ:ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ(ರಿ) ಹಳಿಯಾಳ ಶಾಖೆ ಮುಂಡಗೋಡ ಹಾಗೂ ಪಶುಸಂಗೋಪನಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹುನಗುಂದ ಗ್ರಾಮದಲ್ಲಿ ಬರಡು ದನಗಳ ತಪಾಸಣೆ ಮತ್ತು ಅವುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಹೆಗಡೆ ಹೈನುಗಾರಿಕೆ ನಿರ್ವಹಣೆ ಕುರಿತು ಮಾಹಿತಿ ನೀಡಿ ಕರು ಜನಿಸಿದಾಗ ಮಾಡಬೇಕಾದ ಆರೈಕೆ, ಕೊಟ್ಟಿಗೆ ನಿರ್ವಹಣೆ, ಮೇವು ನಿರ್ವಹಣೆ, ಕೆಚ್ಚಲು ಬಾವು ಮತ್ತು ಗರ್ಭಧಾರಣೆ ಹಂತದಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ರೈತರಿಗೆ ತಿಳಿಸಿದರು. ಸಿಬಿಡಿಆರ್ಸೆಟಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಪಶುಸಂಗೋಪನಾ ಇಲಾಖೆಯ ನಿರ್ಮಲಾ ಕುನ್ನೂರ, ಈರಣ್ಣ ಇಂದೂರ, ಜಗದೀಶ ಹುಲಿಹೊಂಡ ಜಾನುವಾರುಗಳಿಗೆ ಲಸಿಕೆ ಹಾಕಿದರು.
ಈ ಸಂದರ್ಭದಲ್ಲಿ ಬಸವನಗೌಡ ರಾಯನಗೌಡ್ರು, ಸುಭಾಸ ನಡುವಿನಮನಿ ಹಾಗೂ ಊರ ಹಿರಿಯರು ಉಪಸ್ಥಿತರಿದ್ದರು. ಸಿಬಿಡಿಆರ್ಸೆಟಿಯ ಈರಯ್ಯಾ ಚಿಕ್ಕಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 50ಕ್ಕೂ ಹೆಚ್ಚು ರೈತರು ತಮ್ಮ ಜಾನುವಾರುಗಳೊಂದಿಗೆ ಭಾಗವಹಿಸಿ ವೈದ್ಯರ ಸಲಹೆ ಪಡೆದರು. ದನಕರುಗಳಿಗೆ ಹಾಕಲು ಮಿನರಲ್ ಮಿಕ್ಸ-್ಚರ್ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.