ಬಳ್ಳಾರಿ

ಸಂಚಾರಿ ತಂಡದಿಂದ ಜೆಸ್ಕಾಂ ಸಿಬ್ಬಂದಿಗೆ ಲಸಿಕೆ

ಸಂಚಾರಿ ತಂಡದಿಂದ ಜೆಸ್ಕಾಂ ಸಿಬ್ಬಂದಿಗೆ ಲಸಿಕೆ

ಲೋಕದರ್ಶನ ವರದಿ 

ಕಂಪ್ಲಿ 28: ಕರೊನಾ ಲಸಿಕೆ ಪ್ರಮಾಣ ಹೆಚ್ಚಿಸುವ ಹಿನ್ನಲೆಯಲ್ಲಿ ಸಂಚಾರಿ ತಂಡದಿಂದ ಕರೊನಾ ಲಸಿಕೆ ಹಾಕಲಾಗುತ್ತಿದೆ ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನೀರೀಕ್ಷಣಾಧಿಕಾರಿ ಚನ್ನಬಸವರಾಜ್ ಹೇಳಿದರು.ಇಲ್ಲಿನ ಜೆಸ್ಕಾಂ ಕಚೇರಿ ಆವರಣದಲ್ಲಿ ಶುಕ್ರವಾರ ಜೆಸ್ಕಾಂ ಸಿಬ್ಬಂದಿ ಮತ್ತು ಕುಟುಂಬವರ್ಗದವರಿಗೆ ಕರೊನಾ ಲಸಿಕೆ ನೀಡಿ, ಪಟ್ಟಣದಲ್ಲಿ ಇನ್ನು ಶೇ.45ರಷ್ಟು ಕರೊನಾ ಲಸಿಕೆ ನೀಡಿಕೆ ಬಾಕಿ ಉಳಿದಿದ್ದು ಶೇ.100ರಷ್ಟು ಪ್ರಗತಿ ಸಾಧಿಸಬೇಕಿದೆ. ಇದಕ್ಕಾಗಿ ಒಂದು ಸಂಚಾರಿ ತಂಡದೊಂದಿಗೆ ಐದು ಕಡೆ ಬೂತುಗಳನ್ನು ರಚಿಸಿ ಲಸಿಕೆ ನೀಡಲಾಗುತ್ತಿದೆ. ಇಂದು ಆಟೋ, ಟ್ಯಾಕ್ಸಿ ಚಾಲಕ, ಮಾಲಕರಿಗೆ, ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ, ಅಂಚೆ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಿದೆ ಎಂದರು. ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಚಂದ್ರಶೇಖರ್, ಮಹೇಶ್, ದೇವೇಂದ್ರ, ಬಸವರಾಜ್, ಆಶಾ ಕಾರ್ಯಕರ್ತೆಯರಾದ ಶಾರದಾ, ನಾಗರತ್ನ, ಜೆಸ್ಕಾಂ ಮೇಲ್ವಿಚಾರಕ ಬಿ.ಎಚ್‌.ಮಯೂರ್, ಸಿಬ್ಬಂದಿ ಶ್ರೀನಿವಾಸ್, ವಿಜಯಕುಮಾರ್, ಉಮೇಶ್ ಇತರರಿದ್ದರು. 


ಸುದ್ದಿ ಓದಿ