ಹಗರಿಬೊಮ್ಮನಹಳ್ಳಿ

ಲಸಿಕೆ ಹಾಕಿಸಲು ಮುಂದಾದ ಗ್ರಾಮಸ್ಥರು

ಲಸಿಕೆ ಹಾಕಿಸಲು ಮುಂದಾದ ಗ್ರಾಮಸ್ಥರು

ಹಗರಿಬೊಮ್ಮನಹಳ್ಳಿ 09: ತಾಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ಲಸಿಕೆಯಿಂದ ಅಡ್ಡ ಪರಿಣಾಮವಾಗುತ್ತದೆ ಎಂಬ ಆತಂಕದಲ್ಲಿದ್ದ ಮರಬ್ಬಿಹಾಳು ಗ್ರಾಮದ ಗ್ರಾಮಸ್ಥರಿಗೆ ಕೋವಿಡ್19 ಬಗ್ಗೆ ಎಚ್ಚರಿಕೆ ಮೂಡಿಸಿ, ಕೊವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಳ್ಳವಂತೆ ತಹಶೀಲ್ದಾರ್ ಶರಣಮ್ಮ ಮನವಿ ಮಾಡಿದರು.

ಆರೋಗ್ಯ ಇಲಾಖೆಯ ಪ್ರಕಾರ ಮರಬ್ಬಿಹಾಳು ಗ್ರಾಮದಲ್ಲಿ 350 ಕೋವಿಶೀಲ್ಡ್ ಲಸಿಕೆ ಹಾಕುವ ಯೋಜನೆ ಹೊಂದಿದ್ದು ಇದರಲ್ಲಿ ಕೇವಲ ಬೆರಳೆಣಿಯಷ್ಟು ಗ್ರಾಮಸ್ಥರು ಲಸಿಕೆ ಪಡೆದಿದ್ದರು, ಲಸಿಕೆಯಿಂದ ದೂರ ಉಳಿದ ಗ್ರಾಮಸ್ಥರಿಗೆ ತಹಶೀಲ್ದಾರ್ ಮನವೊಲಿಸಿ ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಹಾಗೂ 45ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸುವಂತೆ ಮನವಿ ಮಾಡಿದ ಪರಿಣಾಮ 220ಕ್ಕೂ ಹೆಚ್ಚು ಗ್ರಾಮಸ್ಥರು ಲಸಿಕೆ ಹಾಕಿಸಲು ಮುಂದಾದರು.

ಸುದ್ದಿ ಓದಿ