ವಿ.ಎಸ್.ಬೆಳ್ಳಿಹಾಳ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಹುನಗುಂದ 17: ಗುಡೂರು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ತಾಲೂಕಾ ಮಟ್ಟದ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ವಿಎಂಎಸ್ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ಸಚಿನ ಅಂಗಡಿ, ಅರುಣ ಹೊಸಮನಿ, ವೀರೇಶ ಹಿರೇಮಠ, ಆಕಾಶ ವೀರಾಪುರ, ಸಂಗಮೇಶ ಕಟ್ಟಿಮನಿ, ಮಂಜುನಾಥ ವಾಲೀಕಾರ ಮತ್ತು ವಿದ್ಯಾರ್ಥಿನಿಯರಾದ ಸಹನಾ ಬನಹಟ್ಟಿ, ಅಕ್ಷತಾ ಬೆಳಗಲ್, ಪೂಜಾ ಬಂಡಿ, ಕಾವ್ಯಾ ಸಂಗಮ ಮತ್ತು ಶರಣಮ್ಮ ಬಾವಿಕಟ್ಟಿ ಇವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕ್ರೀಡಾ ಎಸ್.ಬಿ.ಚಳಗೇರಿ ತಿಳಿಸಿದ್ದಾರೆ. ಈ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯಎಚ್.ಎಸ್.ಬೋಳಿಶೆಟ್ಟರ, ಬಾಲ್ಬ್ಯಾಡ್ಮಿಂಟನ್ ತರಭೇತುದಾರ ವೆಂಕಣ್ಣ ದೇವರಡ್ಡಿ ಹಾಗೂ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಅಭಿನಂದಿಸಿದ್ದಾರೆ.