ರಾಷ್ಟ್ರೀಯ

ಇಂದು ವಿಜಯ್ ದಿವಸ್.. ದೇಶದೆಲ್ಲೆಡೆ ಹುತಾತ್ಮ ಯೋಧರಿಗೆ ಗೌರವ ನಮನ

ಇಂದು ವಿಜಯ್ ದಿವಸ್.. ದೇಶದೆಲ್ಲೆಡೆ ಹುತಾತ್ಮ ಯೋಧರಿಗೆ ಗೌರವ ನಮನ

ನವದೆಹಲಿ, ಡಿ 16 : ಪ್ರತಿವರ್ಷ ಡಿಸೆಂಬರ್ 16 ಭಾರತಕ್ಕೆ ಸ್ಮರಣೀಯ ದಿನ, ಏಕೆಂದರೆ ಈ ದಿನ ಭಾರತ, ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಪಾಕಿಸ್ತಾನದ  ವಿರುದ್ದ ಗೆಲುವು ಸಾಧಿಸಿದ ದಿನ.ಆ ಮೂಲಕ  ಪೂರ್ವ ಪಾಕಿಸ್ತಾನದಿಂದ ಬಾಂಗ್ಲಾ ಪ್ರತ್ಯೇಕಗೊಂಡು ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು. 1971 ರಲ್ಲಿ ಈ ದಿನದಂದು ಯುದ್ದ  ಅಂತ್ಯಗೊಂಡು ಪಾಕಿಸ್ತಾನ ಸೇನೆ  ಬೇಷರತ್ತಾಗಿ ಶರಣಾಗತಿಯಾಯಿತು. ಪಾಕಿಸ್ತಾನ  ಸೇನಾ  ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, 93,000 ಪಡೆ ಭಾರತೀಯ ಸೇನೆ  ಹಾಗೂ  ಮುಕ್ತಿ ಬಾಹಿಣಿಗೆ ಶರಣಾಗತಿಯಾಯಿತು.ಆದ್ದರಿಂದ ಭಾರತದಲ್ಲಿ ಈ ದಿನವನ್ನು ಯುದ್ದದಲ್ಲಿ  ದೇಶಕ್ಕಾಗಿ ಹುತಾತ್ಮ  ಯೋಧರಿಗೆ  ಗೌರವ ನಮನ  ಸಲ್ಲಿಸುವ ಮೂಲಕ ದೇಶದಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತದೆ.

ಈ ದಿನದಂದು ಪ್ರತಿವರ್ಷ ದೇಶದ ರಾಜಧಾನಿ ದೆಹಲಿಯಲ್ಲಿ  ರಕ್ಷಣಾ ಇಲಾಖೆ  ಹಾಗೂ ಭಾರತೀಯ ಸೇನಾಪಡೆಗಳ ಮೂರು ವಿಭಾಗಗಳ ಮುಖ್ಯಸ್ಥರು ಇಂಡಿಯಾ ಗೇಟ್ ನಲ್ಲಿರುವ  ಅಮರ್ ಜವಾನ್ ಜ್ಯೋತಿ ಮತ್ತು ಬೆಂಗಳೂರಿನ ರಾಷ್ಟ್ರೀಯ ಸೇನಾ  ಸ್ಮಾರಕದಲ್ಲಿ ಗೌರವಾರ್ಪಣೆ  ಸಲ್ಲಿಸಲಿದ್ದಾರೆ. ಬಾಂಗ್ಲಾದೇಶ ವಿಮೋಚನೆಗಾಗಿ ಮಾರ್ಚ್ 26 ರಿಂದ ಡಿಸೆಂಬರ್ 16 ರವರೆಗೆ  ಪಾಕ್ ಜೊತೆ ಸಮರ  ನಡೆಸಲಾಯಿತು. ಪಾಕಿಸ್ತಾನ ಸೇನೆ   ಆಪರೇಶನ್ ಸರ್ಚ್ ಲೈಟ್ ಕಾರ್ಯಾಚರಣೆ ಮೂಲಕ ಬೆಂಗಾಳಿ  ನಾಗರಿಕರ  ಹತ್ಯಾಕಾಂಡ ನಡೆಸಿತು. ಈ ಹಿನ್ನಲೆಯಲ್ಲಿ 10 ಮಿಲಿಯನ್ ನಿರಾಶ್ರಿತರು ಭಾರತದತ್ತ ಪ್ರವೇಶಿಸಿದ್ದರು.ಇದರಿಂದ ಭಾರತ  ಸಹ ಮುಕ್ತಿ ಬಾಹಿನಿ ಜೊತೆ ಕೈಜೋಡಿಸಿ ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಟ ನಡೆಸಿತು.ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಮರದಲ್ಲಿ ಭಾರತ ವಿಜಯದ ಪತಾಕೆ ಹಾರಿಸಿ  ಇಂದಿಗೆ 49 ವರ್ಷ ಪೂರ್ಣಗೊಂಡಿದೆ. ಭಾರತದ 11 ವಾಯುನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸುವುದರೊಂದಿಗೆ ಈ ಯುದ್ಧ ಆರಂಭವಾಯಿತು. ಈ ಯುದ್ಧದಲ್ಲಿ ಭಾರತ ಹಾಗೂ ಪಾಕಿಸ್ತಾನ 3,800ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದ್ದವು.

 

ಸುದ್ದಿ ಓದಿ