ರಾಷ್ಟ್ರೀಯ

ಲಸಿಕಾ ತಯಾರಿಕೆಯಲ್ಲಿ ವಿಜ್ಞಾನಿಗಳ ಸಾಧನೆ – ಪಿಎಂ ಗುಣಗಾನ

ಲಸಿಕಾ ತಯಾರಿಕೆಯಲ್ಲಿ ವಿಜ್ಞಾನಿಗಳ ಸಾಧನೆ – ಪಿಎಂ ಗುಣಗಾನ

ನವದೆಹಲಿ, ಜ 4 :ಕೊರೋನ  ಸೋಂಕಿಗೆ ದೇಶಿಯವಾಗಿ  ಲಸಿಕಾ  ತಯಾರಿಕೆಯಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ವಿಯಾಗಿರುವುದು  ದೇಶವೇ ಅವರ ಸಾಧನೆಯ ಬಗ್ಗೆ ಅಭಿಮಾನ ಪಡುವಂತಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಮನಸಾರೆ  ಗುಣಗಾನ ಮಾಡಿದ್ದಾರೆ.ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶದ ಉದ್ಘಾಟನಾ ಸಮಾರಂಭವನ್ನು  ವಿಡಿಯೊ ಕಾನ್ಫೆರನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ,  ಜಾಗತಿಕ ಬೇಡಿಕೆ ಮಾತ್ರವಲ್ಲದೆ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಜಾಗತಿಕ ಸ್ವೀಕಾರವೂ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದರು. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಆಧಾರದಲ್ಲಿ ನಾವು 'ಬ್ರ್ಯಾಂಡ್ ಇಂಡಿಯಾ'ವನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.ಇಂದು, ಜಾಗತಿಕ ನಾವೀನ್ಯತೆಯ ಶ್ರೇಯಾಂಕದಲ್ಲಿ ಅಗ್ರ 50ರಲ್ಲಿ ಭಾರತ ಗುರುತಿಸಿಕೊಂಡಿದೆ. ಯಾವುದೇ ಸಂಶೋಧನೆಯ ಪ್ರಭಾವವು ವಾಣಿಜ್ಯ ಹಾಗೂ ಸಾಮಾಜಿಕವಾಗಿದ್ದು, ನಮ್ಮ ತಿಳಿವಳಿಕೆ ವಿಸ್ತರಿಸಲಿದೆ ಎಂದರು.

ಮಾರಕ ಕೊರೊನಾ ವೈರಸ್ ಸೋಂಕಿತರಿಗೆ ತುರ್ತು ಬಳಕೆಗಾಗಿ ಕೋವಿಶೀಲ್ಡ್ ಲಸಿಕೆಗೆ ಅನುಮತಿ ದೊರೆತ ಬೆನ್ನಲ್ಲೇ ಕೋವಿಶೀಲ್ಡ್ ಲಸಿಕೆ ತಯಾರಿಕೆ ಮಾಡುವ ಸಂಬಂಧ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.ಈ ನಿನ್ನೆಯಷ್ಟೇ ಡಿಸಿಜಿಐ ಆಕ್ಸ್ಫರ್ಡ್ ನ ಕೊರೊನಾ ವೈರಸ್ ಲಸಿಕೆ ಮತ್ತು ಭಾರತ್ ಬಯೋಟೆಕ್ನ ಕೊವಾಕ್ಸಿನ್ ಲಸಿಕೆಗಳ  ತುರ್ತುಬಳಕೆಗೆ ನೀಡಲು ಅನುಮತಿ ನೀಡಿದೆ.  


ಸುದ್ದಿ ಓದಿ