ಉತ್ತರಕನ್ನಡ ಜಿಲ್ಲೆ ಅತ್ಯಂತ ಹೆಚ್ಚು ಮತಗಳನ್ನು ನೀಡಿದ ಜಿಲ್ಲೆ:ಹೊರಟ್ಟಿ
ಲೋಕದರ್ಶನ ವರದಿ
ಮುಂಡಗೋಡ:1986ರಿಂದ ಇಲ್ಲಿಯವರೆಗೆ ಉತ್ತರಕನ್ನಡ ಜಿಲ್ಲೆ ಅತ್ಯಂತ ಹೆಚ್ಚು ಮತಗಳನ್ನು ನೀಡಿದ ಜಿಲ್ಲೆಯಾಗಿದೆ ಎಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದ ನಿವೃತ್ತ ನೌಕರರ ಸಭಾಭವನದಲ್ಲಿ ಬಿಜೆಪಿ ಮಂಡಲ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯ ಮತದಾರರೊಂದಿಗೆ ಮನದಾಳದ ಮಾತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾರರು ನನ್ನ ಮೇಲೆ ಮತ್ತು ನಾನೂ ಅವರ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದೇನೆ. ಶಿಕ್ಷಕರ ಸಹಕಾರದಿಂದ ಸತತ 7 ಬಾರಿ ಚುನಾವಣೆಗಳಲ್ಲಿ ಆಯ್ಕೆಯಾಗಿದ್ದೇನೆ. ಯಾವುದೆ ಕೆಲಸ ಕೊಟ್ಟರೂ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಯಾರಿಂದಲೂ ನಾನು ಹಣ ಪಡೆದಿಲ್ಲ. ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಈ ಬಾರಿಯೂ ನಿಶ್ಚಿತವಾಗಿ ಗೆಲ್ಲಲಿದ್ದೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಬಿಜೆಪಿ ಇತಿಹಾಸದಲ್ಲಿ ಇದೊಂದು ವಿಶೇಷ ಚುನಾವಣೆಯಾಗಿದೆ. ಅತ್ಯಂತ ಸಣ್ಣ ಪಕ್ಷ ಎನಿಸಿಕೊಂಡಿದ್ದ ಬಿಜೆಪಿ 303 ಲೋಕಸಭಾ ಸದಸ್ಯರನ್ನು 400 ಸಂಸದರನ್ನು 1300ಕ್ಕಿಂತ ಹೆಚ್ಚು ವಿಧಾನಸಭಾ ಸದಸ್ಯರನ್ನು ಹೊಂದಿದ ವಿಶ್ವದಲ್ಲಿಯೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮತದಾರರು ಸಮಾಧಾನದ ನಿಟ್ಟುಸಿರು ಬಿಡುವ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರು ಪ್ರಥಮ ಪ್ರಾಶಸ್ತ್ಯ ನೀಡಿ ಬಸವರಾಜ ಹೊರಟ್ಟಿ ಅವರನ್ನು ಗೆಲ್ಲಿಸಬೇಕು ಎಂದರು.
ಈ ವೇಳೆ ಪ.ಪಂ.ಅಧ್ಯಕ್ಷ್ಯೆ ರೇಣುಕಾ ರವಿ ಹಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ್ಯೆ ಶಕುಂತಲಾ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ತಾಲೂಕು ಅಧ್ಯಕ್ಷ ನಾಗಭೂಷಣ ಹಾವಣಗಿ, ಎಲ್.ಟಿ.ಪಾಟೀಲ, ಅಶೋಕ ಚಲವಾದಿ, ಗುಡ್ಡಪ್ಪ ಕಾತೂರ, ಮಹೇಶ ಹೊಸಕೊಪ್ಪ, ಮಂಜುನಾಥ ಪಾಟೀಲ, ಸಂತೋಷ ತಳವಾರ, ರಾಜು ಗುಬ್ಬಕ್ಕನವರ, ಗುರುರಾಜ ಕಾಮತ, ಗಣೇಶ ಶಿರಾಲಿ, ಭರತರಾಜ ಹದಳಗಿ, ಎಸ್.ಡಿ.ಮುಡೆಣ್ಣವರ, ಶಿಕ್ಷಕರು ಹಾಗೂ ಮುಂತಾದವರು ಉಪಸ್ಥಿತರಿದ್ದರು.