ಉದ್ಯೋಗ ಖಾತ್ರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಚಾಂದಕವಟೆ
ಇಂಡಿ13: ನರೇಗಾ ಕಾಮಗಾರಿಗಳಾದ ದನದ ಶೆಡ್ಡು, ಹಂದಿ ಶೆಡ್ಡು, ಕುರಿ ಶೆಡ್ಡು, ಬದು ನಿರ್ಮಾಣ, ಕೃಷಿ ಹೊಂಡ, ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕಾ ಪಂಚಾಯತಿ ಐಇಸಿ. ಸಂಯೋಜಕಿ ಜ್ಞಾನಜ್ಯೋತಿ ಅ. ಚಾಂದಕವಟೆ ಸಲಹೆ ನೀಡಿದರು.
ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2022-23ರರ ಸಾಲಿನ ಆರ್ಥಿಕ ವರ್ಷದ ಅಯಾ-ವ್ಯಯ ಅಭಿಯಾನ ಮಾಸಚಾರಣೆ ಆಚರಿಸಲಾಯಿತು.
ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯಂತ ಹತ್ತು ಹಲವಾರು ಇಲಾಖೆಯ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಮೆನೆ-ಮನೆ ಬೇಟಿ ನೀಡುವ ಮೂಲಕ ಸಾರ್ವಜನಿಕರನ್ನೊಳಗೊಂಡು ಸಭೆ ಮಾಡಿ ಮಹಾತ್ಮಗಾಂಧಿ ರಾಷ್ಟ್ರಿಯ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಬೇಡಿಕೆಯ ಪಟ್ಟಿಯ ಮೂಲಕ ಅರ್ಜಿ ಸ್ವೀಕಾರ, ನರೇಗಾ ಯೋಜನೆ ವೈಯಕ್ತಿಕ ಮತ್ತು ಸಮುದಾಯಿಕ ಕಾಮಗಾರಿಗಳ ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಭಾವತಿ ಕುಂಬಾರ, ಶಿವು ಬಿಂಗೊಳ್ಳಿ, ಡಾ.ಎ.ಆರ್. ಚಾಂದಕವಟೆ, ಸುರೇಶ ಆಲೂರ, ಆನಂದಗೌಡ ಚಾಂದಕವಟೆ, ಬಸವರಾಜ ಹೆಗ್ಗೊಂಡೆ, ಸರುಬಾಯಿ ಖೇಡ, ಲಕ್ಷ್ಮಣ ಕೊಳಿ, ನರೇಗಾ ಕೂಲಿಕಾರರು ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.