ಹಗರಿಬೊಮ್ಮನಹಳ್ಳಿ

ಶುದ್ಧ ಕುಡಿಯುವ ನೀರಿನ ಘಟಕಗಳ ನೀರನ್ನು ಬಳಸಿ: ಶಾಸಕ ಎಸ್‌.ಭೀಮಾನಾಯ್ಕ್‌

ಶುದ್ಧ ಕುಡಿಯುವ ನೀರಿನ ಘಟಕಗಳ ನೀರನ್ನು ಬಳಸಿ: ಶಾಸಕ ಎಸ್‌.ಭೀಮಾನಾಯ್ಕ್‌

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 05: ಈ ಭಾಗದಲ್ಲಿ ಉಪಯೋಗಿಸುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು, ಆರೋಗ್ಯದ ಮೇಲೆ ಹತ್ತಾರು ದುಷ್ಪರಿಣಾಮಗಳು ಬೀರುತ್ತವೆ ಹಾಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಬಳಸುವಂತೆ ಶಾಸಕ ಎಸ್‌.ಭಿಮಾನಾಯ್ಕ್‌ ಗ್ರಾಮಸ್ಥರಿಗೆ ತಿಳಿಸಿದರು. 


ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಾದುರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದರಿಂದ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಈ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು ಹಳ್ಳ ಕೊಳ್ಳಗಳು ಭರ್ತಿಯಾಗಿದ್ದು ನೀರು ಕಲುಷಿತಗೊಂಡಿದೆ ಜೊತೆಗೆ ಕುಡಿಯುವ ನೀರಿನ ಪೈಪ್‌ಗಳಲ್ಲಿ ಕಲುಷಿತ ನೀರು ಸೇರಿರುವ ಕಾರಣ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ, ಪ್ರತಿಯೊಬ್ಬರೂ ನೀರನ್ನು ಕಾಯಿಸಿ ಆರಿಸಿ ಸೇವಿಸುವಂತೆ ತಿಳಿಸಿದರು. ಕ್ಷೇತ್ರದಲ್ಲಿ ಪ್ಲೋರೈಡ್ ನೀರು ಬಳಸಿ ಅರೋಗ್ಯವನ್ನು ಹಾಳು ಮಾಡಿಕೊಳ್ಳದಂತೆ 140ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್‌ಕೆಆರ್‌ಡಿಬಿ ಅನುದಾನದಡಿ ಶುಧ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ, ಎಲ್ಲಿಯಾದರೂ ಶುಧ್ಧ ಕುಡಿಯುವ ನೀರಿನ ಘಟಕಗಳು ಸೇವೆ ನೀಡದ ಪರಿಸ್ಥಿತಿಯಲ್ಲಿದ್ದರೆ ಅಧಿಕಾರಿಗಳ ಗಮನಕ್ಕೆ ತರುವುದರ ಜೊತೆ ನನ್ನ ಗಮನಕ್ಕೂ ತಂದರೆ ಕೂಡಲೇ ಕ್ರಮ ವಹಿಸಲಾಗುವುದು ಎಂದರು. 

ತಾಲೂಕು ವೈದ್ಯಾಧಿಕಾರಿ ಶಿವರಾಜ್ ಮಾತನಾಡಿ ಪ್ರಥಮವಾಗಿ ಗಾಮಸ್ಥರು ಧೈರ್ಯವಾಗಿರುವುದರ ಜೊತೆ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ, ಪ್ರಕರಣ ಬೆಳಕಿಗೆ ಬಂದ ತಕ್ಷಣ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲೆ ತಪಾಸಣಾ ಶಿಬಿರ ಏರಿ​‍್ಡಸಲಾಗಿದೆ ಇಲ್ಲಿ ಹತೋಟಿಗೆ ಬರದಿದ್ದರೆ ಕೂಡಲೇ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು, ಈಗಾಗಲೇ ಈ ಬಾಧೆಯಿಂದ ಆಸ್ಪತ್ರೆಗೆ ದಾಖಲಾದವರು ಚೇತರಿಸಿಕೊಂಡಿದ್ದಾರೆ , ಇಲ್ಲಿನ ನೀರು ಪರೀಕ್ಷಿಸಲಾಗಿದ್ದು ಕಲುಷಿತವಾಗಿದೆ ಎಂಬ ವರದಿಯು ಬಂದಾಗಿದೆ ಮುಂದಿನ ಕೆಲ ದಿನಗಳ ಕಾಲ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ತಿಳಿಸಿದರು. 

ಮಾದುರು ಗ್ರಾಮ ಪಂಚಾಯತಿಯ ಪಿಡಿಒ ಮಾತನಾಡಿ ಕಳೆದ ಕೆಲ ದಿನಗಳ ಹಿಂದೆ ಮೋಟರ್ ಸುಟ್ಟುಹೋದ ಕಾರಣ ಬೇರೆ ಮಾರ್ಗದ ಮೋಟಾರ್ ನೀರು ಬಿಡಲಾಗಿದೆ ಜೊತೆಗೆ ಗ್ರಾಮಸ್ಥರಿಗೆ ಮುನ್ಸೂಚನಾ ಕ್ರಮಗಳನ್ನು ನೀಡಲಾಗಿದೆ ಆದರೂ ಈ ವಾಂತಿ ಭೇದಿ ಪ್ರಕರಣಗಳು ಉಲ್ಬಣಗೊಂಡಿದೆ ಕೂಡಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳದಲ್ಲೆ ಆರೋಗ್ಯ ಸೌಲಭ್ಯವನ್ನು ಒದಗಿಸಲಾಗಿದೆ, ಬಳಸುವ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಕರೆ ನೀಡಿದರು. ಶಾಸಕರ ಮಾರ್ಗದರ್ಶನದಂತೆ ಡಂಗುರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ತಿಳಿಸಲಾಗುವುದು ಎಂದರು. 

ಇಒ ಪರಮೇಶ್ವರ​‍್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ದೀಪ, ಬಿಒ ಎಂ.ಸಿ.ಆನಂದ, ಪಿಡಿಒ ಹುಚ್ಚಪ್ಪ ಮಾತನಾಡಿದರು. ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರು, ಗ್ರಾಮಸ್ಥರು, ಗ್ರಾಮ ಪಂಚಾಯತಿ ಸದಸ್ಯರು ಇದ್ದರು. 


ಸುದ್ದಿ ಓದಿ