ಮುಂದಗೋಡ

ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಸಿ:ಬಸವರಾಜ

ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಸಿ:ಬಸವರಾಜ

ಮುಂಡಗೋಡ: ಇತ್ತೀಚೆಗೆ ಶಾಲಾ-ಕಾಲೇಜ್ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ರಾತ್ರಿ ನಿದ್ದೆಗೆಟ್ಟು ಓದುವುದರಲ್ಲಿ ಆಸಕ್ತಿ ತೋರುತ್ತಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಕೆ ಮಾಡಬೇಕು ಎಂದು ಪಿಎಸ್‌ಐ ಬಸವರಾಜ ಮಬನೂರ ಹೇಳಿದರು. 

ಪಟ್ಟಣದ ಕರಗಿನಕೊಪ್ಪದ ಲೊಯೋಲ ಕೇಂದ್ರೀಯ ವಿದ್ಯಾಲಯದಲ್ಲಿ ಇನ್ನರ್"್ಹಲ್ ಕ್ಲಬ್ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಗುಡ್ ಟಚ್ ಬ್ಯಾಡ್ ಟಚ್(ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶ) ಮತ್ತು ರಸ್ತೆ ಸಂಚಾರ ಸುರಕ್ಷತೆ ಕುರಿತ ಕಾರ್ಯಕ್ರಮದಲ್ಲಿ ಅವರು ಸ್ಕ್ರೀನ್ ಪ್ಲೇ ಮೂಲಕ ಉಪನ್ಯಾಸ ನೀಡಿದರು. ಅಪರಿಚಿತರೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಳ್ಳಬಾರದು. ಹೆಣ್ಣು ಮಕ್ಕಳೊಂದಿಗೆ ಯಾರಾದರೂ ಅಸಹನೀಯ ರೀತಿಯಲ್ಲಿ ವರ್ತನೆ ಮಾಡಿದರೆ ಕೂಡಲೆ ನಿಮ್ಮ ತಂದೆ-ತಾು ಅಥವಾ ಹತ್ತಿರದವರಿಗೆ ತಿಳಿಸಬೇಕು. ಮೊಬೈಲ್‌ಗೆ ಅಪರಿಚಿತ ಕರೆಗಳು ಬಂದಾಗ ಎಟಿಎಮ್, ಆಧಾರ, ಬ್ಯಾಂಕ್ ಅಥವಾ ಇನ್ನಿತರ ವಿವರಗಳನ್ನು ನೀಡಬಾರದು. ನಿಮ್ಮ ಮನೆಯಲ್ಲಿ ನಿಮ್ಮ ಪಾಲಕರು ಕಾರು ತೆಗೆದುಕೊಂಡು ಹೋಗುವಾಗ ತಪ್ಪದೆ ಸೀಟ್ ಬೆಲ್ಟ್‌ ಹಾಕಿಕೊಳ್ಳಲು ಮತ್ತು ಬೈಕ್ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ತಿಳಿಸಬೇಕು. ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು ಎಂದರು.     

ಈ ವೇಳೆ ಫಾ.ಮೆಲ್ವಿನ್ ಲೋಬೋ, ಇನ್ನರ್"್ಹಲ್ ಕ್ಲಬ್‌ನ ಕಾರ್ಯದರ್ಶಿ ದಿವ್ಯಾ ರಾವ್, ಉಪಾಧ್ಯಕ್ಷೆ ಸಂಗೀತಾ ಬಾಡಕರ, ಶಶಿರೇಖಾ ಬೈಜು, ಎಡಿಟರ್ ಶಾಲಿನಿ ಮದಭಾವಿ, ಐಎಸ್‌ಒ ಸಿಂಧು ಥಾಮಸ್, ಖಜಾಂಚಿ ಮಂಜುಳಾ ಇಂಗಳೆ, ರಾಜೇಶ್ವರಿ ಅಂಡಗಿ, ಹರಿಣಿ ಪ್ರಸಾದ, ಭಾರತಿ ಗೋಕರ್ಣ, ರೋಟರಿ ಕ್ಲಬ್ ಅಧ್ಯಕ್ಷ ಬೈಜು ವಿ.ಜೆ., ಪ್ರಶಾಂತ ಬಾಡಕರ, ಎಸ್‌.ಕೆ.ಬೋರಕರ, ಡಾ.ಪಿ.ಪಿ.ಛಬ್ಬಿ, ಪೊಲೀಸ್ ಸಿಬ್ಬಂದಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.     

       


ಸುದ್ದಿ ಓದಿ