ಬಳ್ಳಾರಿ

ಇಂಧನವನ್ನು ಅಗತ್ಯವಿದ್ದಷ್ಟು ಬಳಸಿ: ಪ್ರೊ. ಮಧ್ವರಾಜ್

ಇಂಧನವನ್ನು ಅಗತ್ಯವಿದ್ದಷ್ಟು ಬಳಸಿ: ಪ್ರೊ. ಮಧ್ವರಾಜ್

ಬಳ್ಳಾರಿ 15: ಇಂಧನವನ್ನು ಅಗತ್ಯವಿದ್ದಷ್ಟು ಬಳಸಬೇಕು ಅದನ್ನು ಅಪವ್ಯಯ ಮಾಡಬಾರದು ಇದೇ ರಾಷ್ಟ್ರೀಯ ಇಂಧನ ಸಂರಕ್ಷಣೆಯ ಮುಖ್ಯ ಧ್ಯೇಯ. ಇಂಧನ ಸಂಪನ್ಮೂಲಗಳು ಮಾನವನ ಅಗತ್ಯಕ್ಕೆ ತಕ್ಕಂತೆ ಅನವಶ್ಯಕ ಪೋಲಾಗದಂತೆ ಬಳಸಬೇಕು, ಇದರಿಂದ ಇಂಧನ ಸಮರ್ಥ ಭಾರತ ಎಂಬ ಪರಿಕಲ್ಪನೆಯನ್ನು ಮುಂದಿನ ಪೀಳಿಗೆಗೆ ಉಳಿಸಬಹುದು ಎಂದು ಪ್ರೊ. ಮಧ್ವರಾಜ್ ಅಭಿಪ್ರಾಯ ಪಟ್ಟರು. 

ನಗರದ ಟಿ.ಎಂ.ಎ.ಇ.ಎಸ್ ಪಾಲಿಟೆಕ್ನಿಕ್ ನಲ್ಲಿ ದಿ. 14ಮಂಗಳವಾರದಂದು ವಿದ್ಯುತ್ ವಿಭಾಗದಿಂದ ಏರಿ​‍್ಡಸಿದ್ದ  ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಕಾರ್ಯಕ್ರಮಕ್ಕೆ ಹೊಸಪೇಟೆಯ ಪಿಡಿಐಟಿ ಕಾಲೇಜಿನ ಸಹಪ್ರಾಧ್ಯಾಪಕರಾದ  ಪ್ರೊ. ಮಧ್ವರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಇಂಧನ ಸಂರಕ್ಷಣೆಯ ಬಗ್ಗೆ ತಾಂತ್ರಿಕ ವಿದ್ಯಾರ್ಥಿಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಬ್ಯುರೋ ಆಫ್ ಎನರ್ಜಿ ಎಫಿಷಿಯೆನ್ಸಿ ಹಾಗೂ ಕನ್ವರ್ಜೆನ್ಸ್‌ ಎನರ್ಜಿ ಸರ್ವಿಸ್ ಲಿಮಿಟೆಡ್ ಅಡಿಯಲ್ಲಿ ದೇಶದ ಐದು ರಾಜ್ಯಗಳಲ್ಲಿ  2579 ಗ್ರಾಮೀಣ ಪ್ರದೇಶಗಳಲ್ಲಿ ಎಲ್‌.ಇ. ಡಿ. ಬಲ್ಬ್‌ ಗಳನ್ನು ವಿತರಿಸಲಾಗಿದೆ. ಬಿಹಾರ್, ಉತ್ತರ ಪ್ರದೇಶ, ತೆಲಠಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಈ ಯೋಜನೆಯ ಮೂಲಕ 33 ಲಕ್ಷಕ್ಕೂ ಅಧಿಕ  ಎಲ್‌.ಇ.ಡಿ. ಬಲ್ಬ್‌ ಗಳನ್ನು ವಿತರಿಸಿ ಜನರಲ್ಲಿ ಇಂಧನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಮಾಡಲು ಸೌರ ವಿದ್ಯುತ್ ಬಳಕೆ ಹಾಗೂ ಬ್ಯಾಟರಿ ವಿಭಾಗದಲ್ಲಿ ಅತೀ ಹೆಚ್ಚಿನ ಸಂಶೋಧನೆಯ ಅವಶ್ಯಕತೆ ಇದೆ. ಈ ದೆಸೆಯಲ್ಲಿ ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ನಡೆಸಿದರೆ ಇಂಧನ ಸಮರ್ಥ ಭಾರತದ ಪರಿಕಲ್ಪನೆ ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 


ಸುದ್ದಿ ಓದಿ