ಉತ್ತರ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಒತ್ತಾಯ
ಲೋಕದರ್ಶನ ವರದಿ,
ಜಮಖಂಡಿ12; ಕರ್ನಾಟಕ ಭೋವಿ ನಿಗಮ ಸ್ಥಾಪನೆ ಆದಾಗನಿಂದ ಅದರ ಅಧ್ಯಕ್ಷ ಸ್ಥಾನವನ್ನು ದಕ್ಷಿಣ ಕರ್ನಾಟಕದ ಮೂಲದವರಿಗೆ ನೀಡಿದ್ದು. ಈ ಬಾರಿಯಾದರೂ ಉತ್ತರ ಕರ್ನಾಟಕದವರಿಗೆ ನೀಡಬೇಕು ಎಂದು ಭೋವಿ ಸಮುದಾಯ ಯುವ ಘಟಕದ ರಾಜ್ಯ ಸಂಚಾಲಕ ಸಿದ್ದುಬಾ ಬಂಡಿವಡ್ಡರ, ಹಾಗೂ ರಾಜ್ಯ ಮಾಧ್ಯಮ ಪ್ರತಿನಿಧಿ ಹಣಮಂತ ವಡ್ಡರ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
2017 ರಲ್ಲಿ ಲೋಕಾರ್ಪಣೆಗೊಂಡ ಭೋವಿ ಅಭಿವೃದ್ಧಿ ನಿಗಮದಲ್ಲಿ ಇದುವರೆಗೂ ಅಧ್ಯಕ್ಷರಾಗಿ ದಕ್ಷಿಣ ಕರ್ನಾಟಕ ಮೂಲದವರನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲೂ ನಿಗಮದ ನಿರ್ದೇಶಕರನ್ನು ಕೂಡಾ ದಕ್ಷಿಣ ಕರ್ನಾಟಕ ಮೂಲದವರೆ ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಪಕ್ಷವಾಗಿದೆ. ಈಗಾಗಲೇ ಪಕ್ಷ ಅಧಿಕಾರಕ್ಕೆ ಬಂದಿದ್ದು ಕಡಿಮೆ ಅವಧಿಯಲ್ಲಿಯೇ ಪೂರ್ಣ ಪ್ರಮಾಣದ ಸಚಿವ ಸಂಪುಟದವನ್ನು ನೀಡಿದೆ.ಚುನಾವಣೆ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳನ್ನು ಸರ್ಕಾರ ಈಗಾಗಲೇ ತಾರ್ಕಿಕ ಚಾಲನೆ ನೀಡಿದ್ದು ಕೆಲವೇ ದಿನಗಳಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಜಾರಗೊಳಿಸಲಿದೆ ಎಂದರು.
ಈ ಬಾರಿ ಭೋವಿ ಸಮುದಾಯದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ನಿಗಮದ ಅಧ್ಯಕ್ಷ ಹಾಗೂ ನಿರ್ದೇ ಶಕ ಮಂಡಳಿಯಲ್ಲಿ ಸ್ಥಾನಮಾನ ನೀಡಬೇಕೆಂದರು. ಇದೇ ಸಂದರ್ಭದಲ್ಲಿ ಸುರೇಶ ಗಾಡಿವಡ್ಡರ, ಪರಶುರಾಮ ವಡ್ಡರ, ಪ್ರಸನ್ನ ಅಮರಾವರಿ, ಮುತ್ತುರಾಜ ಬಂಡಿವಡ್ಡರ, ಯಂಕಣ್ಣ ಗಾಡಿವಡ್ಡರ ಇನ್ನೂ ಅನೇಕ ಮುಖಂಡರು ಸರಕಾರವನ್ನು ಒತ್ತಾಯಿಸಿದ್ದಾರೆ.