ಬಳ್ಳಾರಿ

ಛಾಯಾಚಿತ್ರ ಪ್ರದರ್ಶನಲ್ಲಿ ದೇಶವಿಭಜನೆಯ ಘೋರಘಟನೆಗಳ ಅನಾವರಣ

ಛಾಯಾಚಿತ್ರ ಪ್ರದರ್ಶನಲ್ಲಿ ದೇಶವಿಭಜನೆಯ ಘೋರಘಟನೆಗಳ ಅನಾವರಣ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ

ಬಳ್ಳಾರಿ 13: ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ದೇಶ ವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನ ನಗರದ ವಿವಿಧೆಡೆ ಶನಿವಾರ ನಡೆಯಿತು. 

ಭಾರತ ವಿಭಜನೆಯು ಮನುಕುಲಕದ ಇತಿಹಾಸದಲ್ಲಿಯೇ ಎಂದು ಕೇಳರಿಯದ ಬಲವಂತದ ಮಹಾಮಾನವ ವಲಸೆಯ ವ್ಯಾಕುಲದ ಕಥೆಯಾಗಿದೆ.ಲಕ್ಷಾಂತರ ಜನ ಅಪರಚಿತ ಜಾಗದಲ್ಲಿ ತಮ್ಮ ಜೀವನ ಕಟ್ಟಿಕೊಳ್ಳಲು,ಹೊಸ ಬದುಕು ಅರಸಿ ಹೊರಟ ಘಟನೆಗಳನ್ನು ಈ ಛಾಯಾಚಿತ್ರ ಪ್ರದರ್ಶನ ನೆನಪಿಸಿತು. 

ನಗರದ ಎಚ್‌.ಆರ್‌.ಗವಿಯಪ್ಪ ವೃತ್ತದ ಬಳಿಯ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಬೃಹತ್ ಧ್ವಜಸ್ತಂಭದ ಧ್ವಜಾರೋಹಣದ ಬಳಿಯ ಏರಿ​‍್ಡಸಲಾಗಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಛಾಯಾಚಿತ್ರಗಳನ್ನು ವೀಕ್ಷಿಸಿದರು. 

ನಗರದ ಹಳೆ ಬಸ್ ನಿಲ್ದಾಣ,ಹೊಸ ಬಸ್ ನಿಲ್ದಾಣ, ಜಿಲ್ಲಾ ಕ್ರೀಡಾಂಗಣದಲ್ಲಿಯೂ ಏರಿ​‍್ಡಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ನೂರಾರು ಜನರು ಛಾಯಾಚಿತ್ರಗಳನ್ನು ವೀಕ್ಷಿಸಿ ದೇಶವಿಭಜನೆಯ ಘೋರಘಟನೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. 

ಈ ಛಾಯಾಚಿತ್ರ ಪ್ರದರ್ಶನ ಆ.15ರವರೆಗೆ ನಗರದ ವಿವಿಧೆಡೆ ಪ್ರದರ್ಶನಗೊಳ್ಳಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ತಿಳಿಸಿದ್ದಾರೆ. 


ಸುದ್ದಿ ಓದಿ