ಹಗರಿಬೊಮ್ಮನಹಳ್ಳಿ

ಕಿತ್ತೂರುರಾಣಿ ಚನ್ನಮ್ಮ ನಾಮಫಲಕ ಅನಾವರಣ

ಕಿತ್ತೂರುರಾಣಿ ಚನ್ನಮ್ಮ ನಾಮಫಲಕ ಅನಾವರಣ
ಹಳೇ ಹಗರಿಬೊಮ್ಮನಹಳ್ಳಿಯ ತಂಬ್ರಹಳ್ಳಿ ವೃತ್ತಕ್ಕೆ ಮರುನಾಮಕರಣ ಮಾಡಿ ಕಿತ್ತೂರು ರಾಣಿ ಚನ್ನಮ್ಮನವರ ನಾಮಫಲಕವನ್ನು ಪಂಚಮಸಾ

ಹಗರಿಬೊಮ್ಮನಹಳ್ಳಿ 19 : ಪಟ್ಟಣದ ಹಳೆ ಊರಿನ ತಂಬ್ರಹಳ್ಳಿ ವೃತ್ತದಲ್ಲಿ ಪಂಚಮಸಾಲಿ ಸಮುದಾಯದ ಪದಾಧಿಕಾರಿಗಳು ಕಿತ್ತೂರು ರಾಣಿ ಚನ್ನಮ್ಮ ನಾಮಫಲಕವನ್ನು ಅನಾವರಣಗೊಳಿಸಿದರು. 

ನಾಮಫಲಕ ಅನಾವರಣಗೊಳಿಸಿದ ಬಳಿಕ ಸಮುದಾಯದ ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮಾಜಿಯವರ ನಾಮಫಲಕವನ್ನು ಕಳೆದ ಬಾರಿ ಪುರ​‍್ರವೇಶ ಮಾಡಿದ ಸಮುದಾಯದ ಪೀಠಾಧೀಶ್ವರರಾದ ಜಯಮೃತ್ಯುಂಜಯ ಮಹಾಸ್ವಾಮೀಜಿಯವರ ಅಮೃತ ಘಳಿಗೆಯಲ್ಲಿ ಅನಾವರಣ ಮಾಡಬೇಕಿತ್ತು. ಆದರೆ, ಕಾರ್ಯಕ್ರಮದ ಒತ್ತಡ ಹಿನ್ನೆಲೆಯಲ್ಲಿ ಮೊತ್ತೊಂದುದಿನ ಈ ಕಾರ್ಯವನ್ನು ನೀವೇ ನೆರವೇರಿಸಿ ಎಂದು ಅಪ್ಪಣೆಯಾದ ನಿಮಿತ್ತ ನಾವು ಪಟ್ಟಣದ ಪ್ರಮುಖ ತಂಬ್ರಹಳ್ಳಿ ವೃತ್ತಕ್ಕೆ ಸಮುದಾಯದ ನಮ್ಮ ಹಿರಿಯರ ಆಶಯದಂತೆ ಮರು ನಾಮಕರಣ ಮಾಡಿ ನಾಮಫಲಕವನ್ನು ಉದ್ಘಾಟಿಸಿದೆವು ಎಂದರು. 

ಸಮುದಾಯದ ಮುಖಂಡ ಚಿತ್ತವಾಡ್ಗಿ ಪ್ರಕಾಶ್, ನೆರೆಗಲ್ ಕೊಟ್ರೇಶ್, ಮೋರಗೆರೆ ಕುಂಟೂರು ನಿಂಗಣ್ಣ, ಬಾವಿ ರವೀಂದ್ರ, ಬಾಬಣ್ಣ, ಕರಿಬಸಪ್ಪ, ಇಟ್ಟಿಗಿ ಗುರುಬಸವರಾಜ್, ದಶಮಾಪುರ ಚಂದ್ರಶೇಖರ್, ಮಾಲವಿ ಸುರೇಶ್ ಮತ್ತಿತರರು ಇದ್ದರು. 


ಸುದ್ದಿ ಓದಿ